ಸೋಮವಾರಪೇಟೆ, ಜ .8: ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆ ಮತ್ತು 59ನೇ ಮಹಾರಥೋತ್ಸವ ಅಂಗವಾಗಿ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ತಾ. 15ರಂದು ಜಿಲ್ಲಾ ಮಟ್ಟದ ಮಹಿಳೆಯರ ಥ್ರೋಬಾಲ್, ತಾ. 16ರಂದು ಅಂತರ್‍ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ಆಯೋಜಿಸಿರುವದಾಗಿ ಸಂಘದ ಅಧ್ಯಕ್ಷ ಬಿ.ಡಿ. ನಿರಂಜನ್ ತಿಳಿಸಿದ್ದಾರೆ. ತಾ.15ರಂದು ಬೆಳಿಗ್ಗೆ 10 ಗಂಟೆಗೆ ಶಾಂತಳ್ಳಿಯ ಸರ್ಕಾರಿ ಶಾಲಾ ಮೈದಾನದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಮಹಿಳೆಯರ ಥ್ರೋಬಾಲ್ ತಂಡದಲ್ಲಿ 9 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರಥಮ ಬಹುಮಾನ ರೂ. 10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 5 ಸಾವಿರ ಮತ್ತು ಟ್ರೋಫಿ ನೀಡಲಾಗುವದು ಎಂದು ಮಾಹಿತಿ ನೀಡಿದ್ದಾರೆ. ಅಪರಾಹ್ನ 3 ಗಂಟೆಗೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, 7 ಮಂದಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಥಮ ಬಹುಮಾನವಾಗಿ ರೂ. 10 ಸಾವಿರ, ದ್ವಿತೀಯ ರೂ. 5 ಸಾವಿರ ಬಹುಮಾನ ನೀಡಲಾಗುವದು. ಪುರುಷರಿಗೆ ಗುಡ್ಡಗಾಡು ಓಟ ಸ್ಪರ್ಧೆ ಆಯೋಜಿಸಿದ್ದು, ಪ್ರಥಮ 4, ದ್ವಿತೀಯ 3, ತೃತೀಯ 2 ಸಾವಿರ ಬಹುಮಾನ ನೀಡಲಾಗುವದು ಎಂದು ನಿರಂಜನ್ ತಿಳಿಸಿದರು.

ತಾ. 16ರಂದು ಬೆಳಿಗ್ಗೆ 10 ಗಂಟೆಗೆ ಅಂತರ್ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ವಿಜೇತರಾದವರಿಗೆ ಪ್ರಥಮ 30 ಸಾವಿರ ನಗದು-ಟ್ರೋಫಿ, ದ್ವಿತೀಯ 20 ಸಾವಿರ ನಗದು-ಟ್ರೋಫಿ, ತೃತೀಯ 10 ಸಾವಿರ ನಗದು-ಟ್ರೋಫಿ ನೀಡಲಾಗುವದು. ಥ್ರೋಬಾಲ್‍ನಲ್ಲಿ ಭಾಗವಹಿಸುವ ತಂಡಗಳು ತಾ. 15ರಂದು ಬೆಳಿಗ್ಗೆ 10 ಗಂಟೆಗೆ, ಕಬಡ್ಡಿಯಲ್ಲಿ ಭಾಗವಹಿಸುವ ತಂಡಗಳು ತಾ. 16ರ ಬೆಳಿಗ್ಗೆ 10 ಗಂಟೆಯ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.

ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಘದ ಉಪಾಧ್ಯಕ್ಷ ಅನಿಲ್ (9483061149) ಕಾರ್ಯದರ್ಶಿ ಕೆ.ಈ. ಲಿಖಿತ್ (ಮೊ: 9483840239) ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ನಿರಂಜನ್ ತಿಳಿಸಿದರು.