ಮಡಿಕೇರಿ, ಜ. 8: ಮಡಿಕೇರಿ ನಗರದ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ತಾ. 14 ರಂದು 28ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವವನ್ನು ಆಚರಿಸಲಾಗುವದು.

ಅಂದು ಬೆಳಿಗ್ಗೆ 6.30ಕ್ಕೆ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, 7.30ಕ್ಕೆ ಗಣಪತಿ ಹೋಮ, ಶ್ರೀ ಮುತ್ತಪ್ಪ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಪೂಜೆ, 9 ರಿಂದ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಎಳನೀರಾಭಿಷೇಕ, ಭಸ್ಮಾಭಿಷೇಕ, ಪುಷ್ಪಾರ್ಚನೆ, 10 ಗಂಟೆಗೆ ಅಲಂಕಾರ ಪೂಜೆ, 11 ಗಂಟೆಗೆ ಶ್ರೀ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ (ಬಲಿಪೂಜೆ), ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಸಂಜೆ 6 ರಿಂದ 7ರ ವರೆಗೆ ಭಜನೆ, 7 ರಿಂದ 8ರ ವರೆಗೆ ಅಲಂಕಾರ ಪೂಜೆ, ಪಡಿ ಪೂಜೆ, 8 ಗಂಟೆಗೆ ದೀಪಾರಾಧನೆ ಹಾಗೂ ಪ್ರಸಾದ ವಿತರಣೆ ಜರುಗಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.