ಸುಂಟಿಕೊಪ್ಪ, ಜ. 8: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ವಾಣಿಜ್ಯ ವ್ಯಾಪಾರಿಗಳಿಂದ ತ್ಯಾಜ್ಯ ನೀರು ಮೋರಿಯಲ್ಲಿ ಶೇಖರಣೆಯಾಗಿರುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇಲ್ಲಿನ ಗ್ರಾಮಸ್ಥರು ದೂರು ನೀಡಿದ ಪರಿಣಾಮ ಮಂಡಳಿಯು ಸುಂಟಿಕೊಪ್ಪ ಗ್ರಾ.ಪಂ.ಪಿಡಿಒ ಅವರಿಗೆ ಪಂಚಾಯಿತಿ ಈ ಬಗ್ಗೆ ತೆಗೆದುಕೊಂಡ ಪರಿಹಾರ ಕ್ರಮದ ಬಗ್ಗೆ ಸೂಕ್ತ ವರದಿ ನೀಡಿ ಸೂಕ್ತ ಕ್ರಮಕ್ಕೆ ಆದೇಶಿಸಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 275ರ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಕೋಳಿ, ಮೀನು ಮತ್ತು ಕುರಿ ಮಾಂಸದ ಅಂಗಡಿಗಳು ವ್ಯಾಪಾರ ಮಾಡುತ್ತಿದ್ದು, ಅದರಿಂದ ಉತ್ಪತ್ತಿಯಾಗುವ ಕೊಳಚೆ ನೀರು ಮೋರಿಯಲ್ಲಿ ನಿಂತ ದುರ್ನಾತ ಬೀರುತ್ತಿದೆ ಎಂದು ಹಲವಾರು ಬಾರಿ ಸಾರ್ವಜನಿಕರು ಇಲ್ಲಿನ ಗ್ರಾ.ಪಂ.ಗೆ ದೂರು ನೀಡಿದ್ದರೂ ಯಾವದೇ ಪರಿಹಾರ ಕಂಡುಕೊಳ್ಳದೇ ಇದ್ದುದರಿಂದ ಗ್ರಾಮಸ್ಥರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಲಿಖಿತ ದೂರು ನೀಡಿದ್ದರು.

ದೂರನ್ನು ಗಂಭೀರವಾಗಿ ಪರಿಗಣಿಸಿದ ಮಂಡಳಿ, ಕಚೇರಿಯ ಸಹಾಯಕ ಪರಿಸರ ಅಧಿಕಾರಿಯೊಬ್ಬರನ್ನು ಕಳುಹಿಸಿ ಸ್ಥಳ ಪರಿವೀಕ್ಷಣೆ ನಡೆಸಿದ ವಿವರವನ್ನು ಮೇಲಾಧಿಕಾರಿ ಗಳಿಗೆ ಸಲ್ಲಿಸಿದ ಪರಿಣಾಮ ಸುಂಟಿಕೊಪ್ಪ ಗ್ರಾ.ಪಂ.ಪಿಡಿಓ ಅವರಿಗೆ ಪತ್ರವನ್ನು ಬರೆದು ಪೂರ್ಣ ಪ್ರಮಾಣದ ಚರಂಡಿ ನಿರ್ಮಿಸಿ ತ್ಯಾಜ್ಯ ನೀರು ಸರಾಗ ವಾಗಿ ಹರಿಯುವ ವ್ಯವಸ್ಥೆ ಮಾಡು ವಂತೆಯೂ ಮತ್ತು ಮೀನು, ಮಾಂಸದ ಮಾರಾಟ ಮಳಿಗೆ ಗಳನ್ನು ನಿರ್ಧಿಷ್ಟ ವಾದ ಸ್ಥಳದಲ್ಲಿ ನಡೆಸಲು ಮತ್ತು ಉತ್ಪತಿ ್ತಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ವಿಲೇ ವಾರಿ ಮಾಡಲು ಕ್ರಮ ಕೈಗೊಳ್ಳ ಬೇಕಾಗಿದೆ. ಪಂಚಾ ಯಿತಿ ಅಧಿಕಾರಿ ಗಳು ಸೂಕ್ತ ಕ್ರಮ ಕೈ ಗೊಂಡು, ತೆಗೆದುಕೊಂಡ ಕ್ರಮದ ಬಗ್ಗೆ ಕೂಡಲೇ ವರದಿ ಸಲ್ಲಿಸುವಂತೆ ಆದೇಶಿಸಿದೆ.