ಮಡಿಕೇರಿ, ಜ. 8: ಕೊಡವ ಭಾಷೆಯನ್ನಾಡುವ 18 ಭಾಷಿಕರ ಸಲಹೆ - ಸಹಕಾರದೊಂದಿಗೆ ಕೊಡವ ಭಾಷೆ, ಸಂಸ್ಕøತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲಾಗುವದೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷ ಪೆಮ್ಮಂಡ ಪೆಮ್ಮಯ್ಯ ಹೇಳಿದರು.ಕೊಡವ ಸಾಹಿತ್ಯ ಅಕಾಡೆಮಿಯಲ್ಲಿಂದು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ಅವರು, ಅಕಾಡೆಮಿಯ ಸದಸ್ಯರುಗಳೆಲ್ಲರೂ ಒಗ್ಗಟ್ಟಿನಿಂದ ಅಕಾಡೆಮಿ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗಲು ಸಹಕಾರ ನೀಡಬೇಕು. ಕೊಡವ ಸಂಸ್ಕøತಿ ದಿಲ್ಲಿವರೆಗೆ ತಲಪಿದೆ. ಅಕಾಡೆಮಿಗೆ ಒಳ್ಳೆಯ ಹೆಸರಿದ್ದು, ಇದನ್ನು ಇನ್ನಷ್ಟು ಬೆಳೆಸಬೇಕು. ಸರಕಾರದ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸೋಣವೆಂದು ಹೇಳಿದರು.
ಅಕಾಡೆಮಿ ಸದಸ್ಯ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, 18 ವರ್ಷಗಳ ಹಿಂದೆ ಸದಸ್ಯನಾಗಿ ಸೇವೆ ಸಲ್ಲಿಸಿದ್ದು, ಇದೀಗ ಮತ್ತೊಮ್ಮೆ ಅವಕಾಶ ದೊರೆತಿದೆ. ಈ ಹಿಂದೆ ಅಕಾಡೆಮಿಯಲ್ಲಿ ಉತ್ತಮ ಕೆಲಸಗಳಾಗಿವೆ. ಹಿಂದಿನ ಸಾಲಿನ ಕಾರ್ಯಚಟುವಟಿಕೆಗಳ ಬಗ್ಗೆ ಗಮನ ಹರಿಸಿ, ಚರ್ಚೆ ಮಾಡಿಕೊಂಡು ಮುಂದುವರಿಯೋಣ. ಎಲ್ಲರೂ ಒಗ್ಗಟ್ಟಿನಿಂದ ಹೊಂದಿಕೊಂಡು ಸರಕಾರದಿಂದ ದೊರಕುವ ಅನುದಾನ, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳೋಣ ಎಂದು ಸಲಹೆ ಮಾಡಿದರು.
ಅಜ್ಜಮಾಡ ಕುಶಾಲಪ್ಪ, ಸಂಸ್ಕøತಿ, ಆಚಾರ- ವಿಚಾರ, ಕಲೆಯನ್ನು ಉಳಿಸಿ ಕೊಂಡು, ಬೆಳೆಸಿಕೊಂಡು ಮುನ್ನಡೆಸಿ ಕೊಂಡು ಹೋಗೋಣವೆಂದರು.
ಸದಸ್ಯ ತೊರೇರ ಮುದ್ದಯ್ಯ ಮಾತನಾಡಿ, ಆಟ್ - ಪಾಟ್ ಪಡಿಪು ಸೇರಿದಂತೆ ಸಂಸ್ಕøತಿಯನ್ನು ಉಳಿಸುವ ಕೆಲಸವಾಗಬೇಕು. ಈ ಹಿಂದೆ ಅಕಾಡೆಮಿ ವತಿಯಿಂದ ಕೈಗೊಳ್ಳಲಾದ ಚಟುವಟಿಕೆಗಳಲ್ಲಿ ಬಿಟ್ಟು ಹೋಗಿರುವದನ್ನು ಗುರುತಿಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಕಾಡೆಮಿಯತ್ತ ಯಾರೂ ಬೊಟ್ಟು ಮಾಡದಂತೆ
(ಮೊದಲ ಪುಟದಿಂದ) ಒಗ್ಗಟ್ಟಿನಿಂದ ಕಾರ್ಯನಿರ್ವಹಣೆ ಮಾಡಬೇಕೆಂದು ಹೇಳಿದರು.
ಇದೇ ಸಂದರ್ಭ ಅಧ್ಯಕ್ಷರು, ಸದಸ್ಯರು ಅಧಿಕಾರ ಸ್ವೀಕರಿಸಿದರು. ಸದಸ್ಯರುಗಳಾದ ಆಪಟ್ಟಿರ ಟಾಟು ಮೊಣ್ಣಪ್ಪ, ಬೀಕಚಂಡ ಬೆಳ್ಯಪ್ಪ, ಚಂಗುಲಂಡ ಸೂರಜ್, ಸುಳ್ಳಿಮಾಡ ಭವಾನಿ ಕಾವೇರಪ್ಪ, ಕುಡಿಯರ ಶಾರದ, ಮನ್ನಕಮನೆ ಬಾಲಕೃಷ್ಣ, ಹಂಚೆಟ್ಟಿರ ಮುದ್ದಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಹೆಚ್.ಟಿ. ಗಣಪತಿ ಪಾಲ್ಗೊಂಡಿದ್ದರು. ಇದಾದ ಬಳಿಕ ಅಕಾಡೆಮಿ ಸರ್ವ ಸದಸ್ಯರ
ಸಭೆ ನಡೆಯಿತು. ಅಕಾಡೆಮಿ ರಿಜಿಷ್ಟ್ರಾರ್ ಉಮರಬ್ಬ ಸ್ವಾಗತಿಸಿ, ನಿರೂಪಿಸಿದರು.