ಕುಶಾಲನಗರ, ಜ. 8: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ನೂತನ ತಾಲೂಕು ರಚಿಸ ಬೇಕೆಂದು ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಸೋಮವಾರ ಅಂತ್ಯಗೊಂಡಿದೆ. ಕಳೆದ 7 ದಿನಗಳಿಂದ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ನಿರತರನ್ನು ಭೇಟಿ ಮಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಉಪವಾಸ ಹಿಂತೆ ಗೆದುಕೊಳ್ಳುವಂತೆ ಮನವೊಲಿಸಿದರು. ತಾಲೂಕು ರಚನೆ ಕುರಿತಾಗಿ ಮುಖ್ಯ ಮಂತ್ರಿಗಳು ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸತ್ಯಾಗ್ರಹ ಹಿಂಪಡೆದು ಕೊಳ್ಳಬೇಕೆಂದು ನಿರಶನ ನಿರತರನ್ನು ಕೋರಿದರು. ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭ ಅವರ ಗಮನಕ್ಕೆ ಮತ್ತೊಮ್ಮೆ ತರಲಾಗುವದು ಎಂಬ ಸಚಿವರ ಭರವಸೆ ಹಿನ್ನಲೆಯಲ್ಲಿ ನಿರಶನ ನಿರತರಾದ ವಿ.ಪಿ.ಶಶಿಧರ್, ಕೆ.ಎಸ್.ರಾಜಶೇಖರ್, ಅಬ್ದುಲ್ ಕರೀಂ, ಎನ್.ಕೆ.ಮೋಹನ್‍ಕುಮಾರ್, ತಮ್ಮಯ್ಯ ಸತ್ಯಾಗ್ರಹ ಹಿಂಪಡೆದು ಕೊಂಡರು. ಸಚಿವರು ನೀಡಿದ ಎಳನೀರನ್ನು ಸೇವಿಸಿ ನಿರಶನ ಅಂತ್ಯಗೊಳಿಸಿದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ, ಮುಂದೆ ನೂತನ ತಾಲೂಕುಗಳ ಪುನರ್‍ರಚನೆ ಸಂದರ್ಭ ಕುಶಾಲನಗರವನ್ನು ಪರಿಗಣನೆಗೆ ತೆಗೆದುಕೊಳ್ಳುವ ಕುರಿತಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಬೆಳಗಾಂಗೆ ನಿಯೋಗ ಭೇಟಿ ನೀಡಿದ್ದ ಸಂದರ್ಭ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದು ತಿಳಿಸಿದರು.
ಹೋರಾಟ ಸಮಿತಿಯ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಹೋರಾಟ ನಿರಂತರ ವಾದ ಪ್ರಕ್ರಿಯೆ, ಬೇಡಿಕೆ ಈಡೇರು ವವರೆಗೆ ಹೋರಾಟ ಮುಂದುವರೆ ಸಲಾಗುವದು. ಉಸ್ತುವಾರಿ ಸಚಿವರ ಕೋರಿಕೆ ಹಾಗೂ ಭರವಸೆ ಮೇರೆಗೆ ಸತ್ಯಾಗ್ರಹ ಹಿಂಪಡೆದುಕೊಳ್ಳಲಾಗಿದೆ ಎಂದರು.
(ಮೊದಲ ಪುಟದಿಂದ) ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ.ಚಂದ್ರಕಲಾ, ಡಿವೈಎಸ್ಪಿ ಮುರಳೀಧರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಕಂದಾಯ ನಿರೀಕ್ಷಕ ನಂದಕುಮಾರ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಹೆಚ್.ಜೆ.ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಹೋರಾಟ ಸಮಿತಿ ಪ್ರಮುಖರಾದ ಅಬ್ದುಲ್ ಖಾದರ್, ದೇವರಾಜ್, ಮಹೇಶ್, ಕೃಷ್ಣ ಮತ್ತಿತರರು ಇದ್ದರು.
ಸಭೆ : ಕುಶಾಲನಗರ ತಾಲೂಕು ಹೋರಾಟ ಸಮಿತಿಯ ಸಭೆ ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ನಡೆಯಿತು. ತಾ. 9ರಂದು (ಇಂದು) ಮಡಿಕೇರಿಗೆ ಆಗಮಿಸುವ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ತಾಲೂಕು ರಚನೆಗೆ ಆಗ್ರಹಿಸಿ ಮನವಿ ಸಲ್ಲಿಸುವ ಕುರಿತು ಚರ್ಚಿಸಲಾಯಿತು. ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವಿತ ತಾಲೂಕು ವ್ಯಾಪ್ತಿಯ 19 ಗ್ರಾ.ಪಂ. ವ್ಯಾಪ್ತಿಯಿಂದ ಜನತೆ ಮಡಿಕೇರಿಗೆ ತೆರಳಿ ಸುದರ್ಶನ ಅತಿಥಿಗೃಹದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿ¸ ಲಾಯಿತು.