ಗೋಣಿಕೊಪ್ಪಲು, ಜ. 8: ಮುಂಜಾನೆ 8.30ರ ಸುಮಾರಿಗೆ ವಿನು ಎಂಬವರು ತಮ್ಮ ಕಾರಿನಲ್ಲಿ ತೋಟಕ್ಕೆ ಕಾರ್ಮಿಕರನ್ನು ಕರೆದು ಕೊಂಡು ಹೋಗುತ್ತಿದ್ದ ಸಂದರ್ಭ ಎದುರಿಂದ ಬಂದ ಖಾಸಗಿ ಬಸ್ ಡಿಕ್ಕಿ ಪಡಿಸಿದ ಹಿನ್ನಲೆಯಲ್ಲಿ ಡಿ.ವಿನು (43) ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಕಾರ್ಮಿಕರಿಗೂ ಗಾಯಗಳಾಗಿದ್ದು, ವಾಹನ ಚಾಲಕ ಹಾಗೂ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲ್ಯಮುಂಡೂರು ಹರಿಹರ ರಸ್ತೆಯ ಭದ್ರಕಾಳಿ ದೇವಸ್ಥಾನ ಸಮೀಪ ಘಟನೆ ನಡೆದಿದ್ದು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.