ಮಡಿಕೇರಿ, ಜ. 8: ಆಲೂರು ಸಿದ್ದಾಪುರ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ವನ್ನು ನಿರ್ವಹಿಸ ಬೇಕಾಗುವದರಿಂದ ತಾ.10ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗು ವದು. ಆದ್ದರಿಂದ, ಹೊನ್ನೆಕೊಪ್ಪಲು, ಹೊಸಗುತ್ತಿ ಮಾಲಂಬಿ, ಗೋಣಿಮರೂರು, ಮಾಲಂಬಿ, ಹೊಸಗುತ್ತಿ, ಸಿದ್ದಲಿಂಗಪುರ, ಆಲೂರು ಸಿದ್ದಾಪುರ, ಗಣಗೂರು ಹಾರೋಹಳ್ಳಿ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.