ಸೋಮವಾರಪೇಟೆ, ಜ. 8: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರುಗಳು ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಶ್ರಮದಾನ ನಡೆಸಿದರು.
ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಸದಸ್ಯರುಗಳು ದೇವಾಲಯ ಆವರಣವನ್ನು ಶುಚಿಗೊಳಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದಾದ್ಯಂತ ದೇವಾಲಯಗಳ ಸ್ವಚ್ಛತಾಕಾರ್ಯ ನಡೆಯುತ್ತಿದ್ದು, ಸ್ವಚ್ಛಭಾರತ್ ನಿರ್ಮಾಣಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಕೈಜೋಡಿಸಿದೆ ಎಂದು ಸೇವಾ ಪ್ರತಿನಿಧಿ ಎಂ.ಎ. ರುಬೀನಾ ತಿಳಿಸಿದರು.