ಕುಶಾಲನಗರ, ಜ. 8: ಕುಶಾಲನಗರದ ಕೆ.ವಿ. ಹರ್ಷಿತ್ ಹ್ಯಾಂಡ್ ಬಾಲ್‍ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಅಯ್ಕೆಯಾಗಿದ್ದಾನೆ.

ಇಲ್ಲಿನ ಬೈಚನಹಳ್ಳಿಯ ಗುಂಡೂರಾವ್ ಬಡಾವಣೆಯ ನಿವಾಸಿಗಳಾದ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ಹಾಗೂ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಉದ್ಯೋಗಿ ಹೆಚ್. ಅರ್. ರಾಜಮ್ಮ ಅವರ ಪುತ್ರನಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕುರುಬೂರು ವಿನಲ್ಲಿರುವ ಛಿoಟಟege ಔಜಿ seಡಿiಛಿuಟಣuಡಿe ನಲ್ಲಿ ಬಿ.ಎಸ್.ಸಿ. ಮೂರನೇಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹರ್ಷಿತ್ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ಹರಿಯಾಣದ ರೋತಕ್ ಪಟ್ಟಣದಲ್ಲಿ ನಡೆದ ಎರಡು ದಿನದ ರಾಷ್ಟ್ರ ಮಟ್ಟದ ಹ್ಯಾಂಡ್‍ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸು ವದರೊಂದಿಗೆ ಮಲೇಷಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಹ್ಯಾಂಡ್‍ಬಾಲ್ ತಂಡಕ್ಕೆ ಅಯ್ಕೆಯಾಗಿದ್ದಾನೆ.