ನಾಪೋಕ್ಲು, ಜ. 7: ವಿಪ್ರೋ ಸಾಫ್ಟ್ ಟಚ್ ಕಂಪೆನಿ ವತಿಯಿಂದ ಸಂಕ್ರಾಂತಿ ಪ್ರಯುಕ್ತ ಇಲ್ಲಿಗೆ ಸಮೀಪದ ಚೆರಿಯಪರಂಬುವಿನಲ್ಲಿ ಮಹಿಳೆಯರಿಗಾಗಿ ಏರ್ಪಡಿಸ ಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಸರಸ್ವತಿ ಮನೋಹರಿ ಪ್ರಥಮ ಸ್ಥಾನ ಗಳಿಸಿದರು. ತನ್ಮಯಿ ಹಾಗೂ ವಿಜಯಲಕ್ಷ್ಮಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ರಂಗೋಲಿ ಸ್ಪರ್ಧೆಯಲ್ಲಿ 30ಕ್ಕೂ ಅಧಿಕ ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ವಿಜೇತರಿಗೆ ಕಂಪೆನಿ ವತಿಯಿಂದ ಆಕರ್ಷಕ ಕೊಡುಗೆಗಳನ್ನು ನೀಡಿ ಪುರಸ್ಕರಿಸಲಾಯಿತು. ಕಂಪೆನಿ ಯವರು, ಚೆರಿಯಪರಂಬು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ ಪಾಲ್ಗೊಂಡಿದ್ದರು.