ಮಡಿಕೇರಿ, ಜ. 7: ಸಿದ್ದಲಿಂಗಾಪುರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರೋಧಿಸುವದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ತೊರೆನೂರು ಗ್ರಾ.ಪಂ. ಸದಸ್ಯ ರವಿಕುಮಾರ್, ಗಣಿಗಾರಿಕೆ ಬಗ್ಗೆ ನಿರಾಧಾರ ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಗಿಡ್ಡಮ್ಮ ಎಂಬವರು ಸಿದ್ದಲಿಂಗಾಪÀÅರದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಪ್ರಸ್ತುತ ಅಲ್ಲಿ ಉತ್ಪಾದನೆಯಾಗುವ ಎಂ. ಸ್ಯಾಂಡ್ ಗ್ರಾಮಸ್ಥರ ಮನೆ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.

ಗಣಿಗಾರಿಕೆ ನಡೆಯುತ್ತಿರುವ ಸ್ಥಳದ ಸುತ್ತಮುತ್ತಲಲ್ಲಿ ಜನವಸತಿ ಇಲ್ಲ. ಅಂದಾಜು ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಮನೆಗಳಿವೆ. ಗಣಿಗಾರಿಕೆ ಕಾನೂನು ಬದ್ಧವಾಗಿ ನಡೆಯುತ್ತಿದ್ದು, ನಿಯಮ ಉಲ್ಲಂಘನೆಯಾಗಿರುವದು ಕಂಡು ಬಂದಿಲ್ಲ. ಒಂದೊಮ್ಮೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದಲ್ಲಿ ತನಿಖೆ ನಡೆಯಲಿ ಎಂದು ತಿಳಿಸಿದರು.

ಗಣಿಗಾರಿಕೆ ನಡೆಸುತ್ತಿರುವ ಗಿಡ್ಡಮ್ಮ ಅವರ ಪುತ್ರ ರಮೇಶ್ ಮಾತನಾಡಿ, ಸಿದ್ದಲಿಂಗಪÀÅರದಲ್ಲಿ ಗಣಿಗಾರಿಕೆಗೆ ಅಗತ್ಯವಿರುವ ಎಲ್ಲಾ ಪರವಾನಗಿಗಳನ್ನು ಪಡೆದು ನಡೆಸುತ್ತಿರುವದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಗ್ರಾಮಸ್ಥರಾದ ಚಂಗಪ್ಪ ಹಾಗೂ ಯಶೋಧ ಉಪಸ್ಥಿತರಿದ್ದರು.