ಸೋಮವಾರಪೇಟೆ, ಜ. 5: ಸಮೀಪದ ಗೋಣಿಮರೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಬಸವೇಶ್ವರ ದೇವಾಲಯಕ್ಕೆ ರಾಜ್ಯ ಮುಜರಾಯಿ ಇಲಾಖೆ ಯಿಂದ ಬಿಡುಗಡೆಯಾದ ರೂ. 1 ಲಕ್ಷ ಅನುದಾನದ ಚೆಕ್ ಅನ್ನು ಶಾಸಕ ಅಪ್ಪಚ್ಚು ರಂಜನ್ ವಿತರಿಸಿದರು. ಶಾಸಕರ ಕಚೇರಿ ಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಜಿ.ಎಂ. ಮೋಹನ್ ಶಾಸಕರಿಂದ ಚೆಕ್ ಸ್ವೀಕರಿಸಿದರು.