ಮಡಿಕೇರಿ, ಜ. 5: ಮೈಸೂರು ಹಾಗೂ ಮಡಿಕೇರಿ ಹಿಯರಿಂಗ್, ಟೆನ್ನಿಟಸ್ ಮತ್ತು ಇಂಪ್ಲಾಂಟ್ ಕ್ಲಿನಿಕ್, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮೈಸೂರು, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಮಡಿಕೇರಿ ಹಾಗೂ ಅಮೃತ ಇಎನ್‍ಟಿ ಕೇರ್ ಕ್ಲಿನಿಕ್ ಸಂಯುಕ್ತಾಶ್ರಯದಲ್ಲಿ ನಗರದ ರಾಜಾಸೀಟ್ ರಸ್ತೆಯಲ್ಲಿರುವ ಅಮೃತ ಇಎನ್‍ಟಿ ಕೇರ್ ಕಾಫಿ ಕೃಪಾದಲ್ಲಿ ಉಚಿತ ಶ್ರವಣ ಪರೀಕ್ಷೆ ಹಾಗೂ ಸಕ್ಕರೆ ಕಾಯಿಲೆ ತಪಾಸಣಾ ಶಿಬಿರ ನಡೆಯಿತು.

ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಇಎನ್‍ಟಿ ಶಸ್ತ್ರ ಚಿಕಿತ್ಸಕ ಡಾ. ಸಿ.ಎಂ. ದೇವಯ್ಯ, ಜನರ ಆರ್ಥಿಕ ಸ್ಥಿತಿಯ ಹೊರತಾಗಿ ಎಲ್ಲರಿಗೂ ಸಮಗ್ರ ಸೇವೆ ಒದಗಿಸುವದು ಶಿಬಿರದ ಮುಖ್ಯ ಉದ್ದೇಶ ಎಂದು ಹೇಳಿದರು. ಡಾ. ಮೋಹನ್ ಅಪ್ಪಾಜಿ ಮಾತನಾಡಿ, ಮಕ್ಕಳು ಮತ್ತು ವಯಸ್ಕರಿಗೆ ಅದರಲ್ಲೂ ಬಡವರಿಗೆ ಉಚಿತ ಶ್ರವಣ ಮತ್ತು ಸಕ್ಕರೆ ಕಾಯಿಲೆ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಉಚಿತ ಶ್ರವಣ ಪರೀಕ್ಷೆ ಹಾಗೂ ಸಕ್ಕರೆ ಕಾಯಿಲೆ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ರೋಟರಿ ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಕಾರ್ಯಪ್ಪ, ಆಡಿಯೋಲಾಜಿಸ್ಟ್ ವಿಜಯಲಕ್ಷ್ಮಿ, ಜಿಲ್ಲಾ ರೋಟರಿ ಗವರ್ನರ್ ಡಾ. ಸುರೇಶ್ ಚಂಗಪ್ಪ, ಮಡಿಕೇರಿ ರೋಟರಿ ಅಧ್ಯಕ್ಷ ಪಿ.ಯು. ಪ್ರೀತಂ, ಇನ್ನರ್ ವೀಲ್ ಅಧ್ಯಕ್ಷೆ ಲತಾ ಚಂಗಪ್ಪ, ಪ್ರಮುಖರಾದ ಸಿರಿ ಉಪಸ್ಥಿತರಿದ್ದರು.