ನಾಪೆÇೀಕ್ಲು: ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರದಲ್ಲಿ ರೂ. 7 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 2 ಕೋಟಿಗೂ ಅಧಿಕ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ವಸತಿ ಯೋಜನೆಯಡಿಯಲ್ಲಿ ವಸತಿ ರಹಿತರಿಗೆ 100 ಕ್ಕೂ ಅಧಿಕ ಮನೆಯನ್ನು ನೀಡಲಾಗಿದೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ, ಸದಸ್ಯರಾದ ಮಹಮ್ಮದ್ ಖುರೇಶಿ, ಪಿ.ಎಂ. ರಷೀದ್, ಟಿ.ಎ. ಮಹಮ್ಮದ್, ವನಜಾಕ್ಷಿ, ಶಹನಾಜ್, ಗುತ್ತಿಗೆದಾರ ಮಂಜುನಾಥ್, ಗ್ರಾಮಸ್ಥರಾದ ವಿಜಯ, ಕನಕ, ಶಶಿ, ಸುಬ್ರಮಣಿ, ಮಹಮ್ಮದ್ ಆಲಿ, ಅಲೀಮ, ಕೆ. ಸುರೇಶ್, ಮತ್ತಿತರರು ಇದ್ದರು.
* ಮಡಿಕೇರಿ ತಾಲೂಕು ಕಡಂಗದ ಅರಪಟ್ಟು ಗ್ರಾಮದಲ್ಲಿ ಬದ್ರಿಯ ಮಸೀದಿ ರಸ್ತೆ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಶಾಸಕರ ಅನುದಾನ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಗ್ರಾಮ ಪಂಚಾಯಿತಿ ಸದಸ್ಯರಾದ ಕೋಡಿರ ಪೊನ್ನಪ್ಪ, ಕಣಿಯಂಡ ಪ್ರಕಾಶ್, ಬಲ್ಯಮಿದೇರಿರ ರೋಹಿಣಿ, ಬಿಳಿಯಂಡ್ರ ರತೀಶ್, ಐತಿಚಂಡ ಭೀಮಯ್ಯ, ನೆರವಂಡ ಸುಶ ಸೋಮಯ್ಯ, ಕೋಲೆಯಂಡ ಗಿರೀಶ್, ಅನ್ನಂಬಿರ ಅನುರಾಧ, ನೆರವಂಡ ಸತೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.