ಮಡಿಕೇರಿ, ಜ. 5: ಇತ್ತೀಚೆಗೆ ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಯೋಜಿಸಿದ್ದ 38ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್‍ನಲ್ಲಿ ನಾಂಗಾಲ ಗ್ರಾಮದ ಚೇಮಿರ ಸೀತಮ್ಮ (ಪ್ರೇಮ) ಅವರು 55 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಭಾರದ ಗುಂಡು ಎಸೆತದಲ್ಲಿ ಪ್ರಥಮ, ಡಿಸ್ಕಸ್ ಎಸೆತದಲ್ಲಿ ಪ್ರಥಮ ಹಾಗೂ ಐದು ಕಿ.ಮೀ. ವೇಗದ ನಡಿಗೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಇವರು ಚೇಮಿರ ಸುಬ್ಬಯ್ಯ (ವಾಸು) ಅವರ ಪತ್ನಿ.10000 ಮೀ ಓಟದಲ್ಲಿ ಪ್ರಥಮ
ಇದೇ ಕ್ರೀಡಾಕೂಟದಲ್ಲಿ ಮಡಿಕೇರಿಯ ಶೈಲಜಾ ಮೊಣ್ಣಪ್ಪ ಅವರೂ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಬಹುಮಾನ ಪಡೆದುಕೊಂಡಿದ್ದಾರೆ.
10 ಸಾವಿರ ಮೀ. ಓಟದಲ್ಲಿ ಪ್ರಥಮ, 15 ಸಾವಿರ ಮೀ. ಓಟದಲ್ಲಿ ದ್ವಿತೀಯ, 300 ಮೀ. ಹಲ್‍ಡರ್ಸ್‍ನಲ್ಲಿ ದ್ವಿತೀಯ, 80 ಮೀ. ಹಲ್‍ಡರ್ಸ್‍ನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ಮುಂದಿನ ಫೆಬ್ರವರಿ 21 ರಿಂದ 25ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಮಡಿಕೇರಿಯ ಇಂದಿರಾನಗರ ನಿವಾಸಿಯಾಗಿದ್ದು, ಸೋಮವಾರಪೇಟೆ ತಾಲೂಕಿನ ಗರಗಂದೂರಿನ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.