ಮಡಿಕೇರಿ, ಜ. 5: ಕೊಡಗು ಪ್ರೆಸ್‍ಕ್ಲಬ್ ವತಿಯಿಂದ 2017ನೇ ವರ್ಷದಲ್ಲಿ ಪ್ರಕಟವಾದ ಅತ್ಯುತ್ತಮ ಪರಿಣಾಮಕಾರಿ ವರದಿಗೆ ಕೆ.ಬಿ.ಮಹಂತೇಶ್ ಸ್ಮರಣಾರ್ಥ ಪ್ರೆಸ್‍ಕ್ಲಬ್ ವಾರ್ಷಿಕ ವರದಿ ಪ್ರಶಸ್ತಿ ನೀಡಲಾಗುತ್ತದೆ.2017ನೇ ಸಾಲಿನ ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಹಾಗೂ ದೃಶ್ಯ ವಾಹಿನಿಗಳಲ್ಲಿ ಪ್ರಸಾರವಾಗಿರುವ ವರದಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಕೊಡಗು ಪ್ರೆಸ್‍ಕ್ಲಬ್ ಸದಸ್ಯರು ಮಾತ್ರ ಪ್ರಶಸ್ತಿಗೆ ವರದಿ ಸಲ್ಲಿಸಬಹುದಾಗಿದೆ. ಪತ್ರಿಕೆ ವರದಿಯ ಮೂರು ಪ್ರತಿ, ದೃಶ್ಯ ಮಾಧ್ಯಮದಲ್ಲಿ ಪ್ರಸಾರ ಆಗಿರುವ ವರದಿಯ ಸಿಡಿ ತಾ. 15 ರೊಳಗೆ ಪ್ರೆಸ್‍ಕ್ಲಬ್ ಕಚೇರಿಗೆ ತಲುಪಿಸಬೇಕು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರೆಸ್‍ಕ್ಲಬ್ ಆಡಳಿತ ಮಂಡಳಿ ಸಭೆಯಲ್ಲಿ ಮೃತಪಟ್ಟ ಹಿರಿಯ ಪತ್ರಕರ್ತ ಕೆ.ಬಿ. ಮಹಂತೇಶ್ ಸ್ಮರಣಾರ್ಥ ವಾರ್ಷಿಕ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತೆಂದು ಕ್ಲಬ್ ಜಂಟಿ ಕಾರ್ಯದರ್ಶಿ ವಿಘ್ನೇಶ್ ಎಂ. ಭೂತನಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.