ಗೋಣಿಕೊಪ್ಪ ವರದಿ, ಜ. 5 : ನ್ಯಾಷನಲ್ ಸಬ್ ಜೂನಿಯರ್ ಹಾಕಿ ಟೂರ್ನಿಯಲ್ಲಿ ಹಾಕಿ ಕೂರ್ಗ್ ಹಾಗೂ ಅಸ್ಸಾಂ ಹಾಕಿ ತಂಡದ ಪಂದ್ಯಾಟ ಡ್ರಾ ಆಯಿತು.
ಹಾಕಿ ಇಂಡಿಯಾ ಸಹಯೋಗದಲ್ಲಿ ಅಸ್ಸಾಂ ಹಜೋಯಿ ಮೈದಾನದಲ್ಲಿ ನಡೆಯುತ್ತಿರುವ ನಡೆದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು 2-2 ಗೋಲುಗಳ ಮೂಲಕ ಡ್ರಾ ಮಾಡಿಕೊಂಡಿತು. ಹಾಕಿಕೂರ್ಗ್ ಪರ ರಕ್ಷಿತ್ 2 ಗೋಲು ಹೊಡೆದು ಮಿಂಚಿದರು.
ಹಾಕಿಕೂರ್ಗ್ ಪರ ತಂಡದಲ್ಲಿ ಗೋಲ್ ಕೀಪರ್ ಆಗಿ ಡಿ. ಜಿ. ಸುಜಯ್, ಬಿ.ಬಿ ಗ್ಯಾನ್ ಗಣಪತಿ, ಸಿ ಶರತ್, ಕೆ.ಜೆ ನಿಕಿಲ್ ಜೋಸೆಫ್, ಹೆಚ್.ಎಂ ಅನಂತ್, ಎನ್.ಟಿ ತರುಣ್, ಕ್ಯಾಪ್ಟನ್ ಎಂ.ಕೆ ಚೇತನ್, ಎಂ.ಯು ಅಕಿಲ್ ತಿಮ್ಮಯ್ಯ, ಮೊಯ್ದ್ ಹುಮಾಜ್, ಕೆ.ಎಂ ಯಶವಂತ್, ಎ.ಡಿ ರಕ್ಷಿತ್ ಕಾರ್ಯಪ್ಪ, ಎಂ.ಎಸ್ ಮೊನೀಶ್ ಮಂದಣ್ಣ, ಸಿ.ಜಿ ನಿಕೇತ್, ಬಿ ಅರ್ಜುನ್, ಗೋಲ್ ಕೀಪರ್ ಹೆಚ್.ಎಸ್ ಮೋಹಿತ್, ಎಂ.ಎ ಗೌತಮ್, ಬಿ.ಎಸ್ ವಿಘ್ನೇಷ್, ಎಸ್.ಕೆ ದಿಕ್ಷೀತ್ ಆಟವಾಡಿದರು.