ಕೂಡಿಗೆ, ಜ. 5: ಕೃಷಿಕರ ಉಳುಮೆ ಭೂಮಿಯಲ್ಲಿ ಲವಣ, ಪೆÇೀಷಕಾಂಶದಂತಹ ಉತ್ತಮ ಸಾವಯವ ಅಂಶಗಳನ್ನು ಸೇರಿಸಬೇಕು. ಜೊತೆಗೆ ಉತ್ತಮವಾದ ಬೆಳೆ ಬೆಳೆಯಲು ಸಹಕಾರಿ ಆಗುವಂತೆ ಮಣ್ಣು ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿ ಅದಕ್ಕೆ ಅನುಗುಣವಾಗಿ ಕೃಷಿ ತಜ್ಞರ ಸಲಹೆ ಪಡೆಯಬೇಕು ಎಂದು ಕೃಷಿ ಇಲಾಖೆಯ ಸಹಾಯ ನಿರ್ದೇಶಕ ರಾಜಶೇಖರ್ ಹೇಳಿದರು.

ಕೂಡಿಗೆ ಮಣ್ಣು ಪರೀಕ್ಷಾ ಕೇಂದ್ರದ ಅವರಣದಲ್ಲಿ ಅರಣ್ಯ ರಕ್ಷಕರಿಗೆ ಆಯೋಜಿಸಿದ್ದ ಮಣ್ಣು ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರವನ್ನು ಆಧುನೀಕರಿಸಲಾಗಿದ್ದು ಅದರ ಉಪಯೋಗವನ್ನು ಕೃಷಿಕರು ಪಡೆಯುವಂತಾಗಬೇಕು ಎಂದರು.

ಈ ಸಂದರ್ಭ ವಲಯ ಅರಣಾಧಿಕಾರಿ ವಿನುತಾ, ಮಣ್ಣು ಪರೀಕ್ಷಾ ಕೇಂದ್ರ ದೀಪಕ್, ಪೂಜಾ ಅಂಕುಶ್ ಮತ್ತು ಅರಣ್ಯ ರಕ್ಷಕ ತರಬೇತಿ ಕೇಂದ್ರ ವಿದ್ಯಾರ್ಥಿಗಳು ಇದ್ದರು.