ಶನಿವಾರಸಂತೆ, ಜ. 5: ಕೊಡ್ಲಿಪೇಟೆ ಹೋಬಳಿಯ ಬೆಂಬಳೂರು ಗ್ರಾಮದಲ್ಲಿ ತಾ. 16 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ರವರೆಗೆ ಇತಿಹಾಸ ಪ್ರಸಿದ್ಧ ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರೆ ನಡೆಯಲಿದೆ.ಜಾತ್ರೆಯ ಪೂರಕವಾಗಿ ತಾ. 15 ರಂದು ಮಡೆ ಪೂಜೆಗಾಗಿ ಗ್ರಾಮದ ಪಟೇಲರ ಮನೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ದವಸ, ಧಾನ್ಯ, ಹಣ್ಣು-ತರಕಾರಿಗಳನ್ನು ಸ್ವೀಕರಿಸಲಾಗುವದು. ಸಂಜೆ 9.30 ಕ್ಕೆ ಮಡೆ ಪೂಜೆ ನಡೆಯುತ್ತದೆ. ಸಂಜೆ 5 ಗಂಟೆಯಿಂದ 8 ಗಂಟೆಯೊಳಗೆ ಶ್ರೀ ಬಾಣಂತಮ್ಮ ಕುಮಾರಲಿಂಗೇಶ್ವರ ದೇವರ ಗಂಗಾಸ್ನಾನ, ಅಡುಗೆ ಒಲೆಪೂಜೆ ನಡೆಯಲಿದೆ. ನಂತರ ಗ್ರಾಮಸ್ಥರು ಮತ್ತು ಭಕ್ತಾದಿಗಳೊಡಗೂಡಿ ಮೆರವಣಿಗೆಯಲ್ಲಿ ಮಡೆಯನ್ನು ಅಡುಗೆ ಒಲೆ ಹತ್ತಿರ ಕೊಂಡೊಯ್ಯಲಾಗುತ್ತದೆ. ಮರು ದಿನ ತಾ. 16 ರಂದು ಭಕ್ತಾದಿಗಳಿಗೆ ಬೆಳಿಗ್ಗೆ ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.