ಕುಶಾಲನಗರ, ಜ. 5: ಫೆಬ್ರವರಿ ಯಲ್ಲಿ ನಡೆ ಯುವ ಮಹಾ ಶಿವರಾತ್ರಿ ಅಂಗವಾಗಿ ಕುಶಾಲನಗರದ ದೇವಾಲಯಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗ ದೊಂದಿಗೆ ಶೋಭಾಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಕುಶಾಲನಗರದ ವಾಸವಿ ಮಹಲ್‍ನಲ್ಲಿ ನಡೆದ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಶಿವರಾತ್ರಿ ಹಬ್ಬವನ್ನು ಭಕ್ತಿಭಾವಗಳೊಂದಿಗೆ ಒಟ್ಟಾಗಿ ಸೇರಿ ಆಚರಿಸುವದು, ದಿನದ ಮಹತ್ವದ ಬಗ್ಗೆ ಭಕ್ತಾದಿಗಳಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ಮುಂತಾದ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಆಚರಣೆ ಅಂಗವಾಗಿ ಕುಶಾಲನಗರ ದೇವಾಲಯ ಒಕ್ಕೂಟದ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರನ್ನೊಳಗೊಂಡ ಉಪ ಸಮಿತಿ ರಚಿಸಲಾಯಿತು. ಸಂಘಟನೆಗಳ ಪ್ರಮುಖರಾದ ಜನಾರ್ಧನ್, ಅನುದೀಪ್, ಚಂದ್ರು, ಅಮೃತ್‍ರಾಜ್, ಅರ್ಚಕರ ಸಂಘದ ಅಧ್ಯಕ್ಷರಾದ ಪರಮೇಶ್ವರ ಭಟ್, ವಿ.ಎಸ್. ಆನಂದ್ ಕುಮಾರ್ ನೇತೃತ್ವದಲ್ಲಿ ಉಪಸಮಿತಿ ರಚನೆ ಮಾಡಲಾಯಿತು.

ಕಾರ್ಯಕ್ರಮದ ಬಗ್ಗೆ ಕೆ.ಎಸ್. ನಾಗೇಶ್ ಮತ್ತು ಜನಾರ್ಧನ್ ಅವರುಗಳು ಸಭೆಗೆ ಮಾಹಿತಿ ಒದಗಿಸಿದರು.

ಈ ಸಂದರ್ಭ ಕುಶಾಲನಗರ ದೇವಾಲಯ ಒಕ್ಕೂಟದ ಅಧ್ಯಕ್ಷ ಕೆ.ಕೆ. ದಿನೇಶ್, ಸ್ಥಾಪಕ ಅಧ್ಯಕ್ಷ ಕೆ.ಆರ್. ಶಿವಾನಂದನ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಸಮಿತಿಯ ಪ್ರಮುಖರಾದ ಬಿ.ಎಲ್. ಸತ್ಯನಾರಾಯಣ, ಎಂ.ಕೆ. ದಿನೇಶ್, ಕಣಿವೆ ನಂಜುಂಡಸ್ವಾಮಿ, ಪಿ.ಎನ್. ವಿಜಯೇಂದ್ರ, ಕೆ.ಎನ್. ದೇವರಾಜ್, ಹೆಚ್.ಟಿ. ವಸಂತ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಎಂ. ಕೃಷ್ಣ ಮತ್ತಿತರರು ಇದ್ದರು.