ಸುಂಟಿಕೊಪ್ಪ, ಜ. 4: ಆರ್‍ಎಸ್‍ಎಸ್‍ನ ರಾಷ್ಟ್ರೀಯ ಸೇವಾ ದಿನದ ಅಂಗವಾಗಿ ಐಗೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛತಾ ಆಂದೋಲನ ಕಾರ್ಯವನ್ನು ನಡೆಸಿದರು.

ಕಾಜೂರಿನ ಜಂಕ್ಷನ್‍ನಿಂದ ಐಗೂರು ಗ್ರಾಮ ಪಂಚಾಯಿತಿ ಕಛೇರಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಗಿಡ ಗಂಟೆಗಳನ್ನು ಕಡಿದು ದಾರಿ ಹೋಕರು ಎಸೆದು ಹೋದ ಪ್ಲಾಸ್ಟಿಕ್ ಇತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಪ್ರತಿಯೊಬ್ಬರೂ ತಮ್ಮ ಮನೆಯಿಂದಲೇ ಸ್ವಚ್ಛತೆ ಕಾಪಾಡುವ ಮೂಲಕ ಊರಿನಲ್ಲಿ ಹೋದ ಕಡೆಗಳಲ್ಲಿ ತಂಗಿದ್ದ ರೆಸಾರ್ಟ್ ಹೋಂಸ್ಟೇಯಲ್ಲಿ ರಸ್ತೆ ಬದಿಯಲ್ಲಿ ಅಡುಗೆ ಮಾಡಿ ತಿಂದು ಪ್ಲಾಸ್ಟಿಕ್ ತಟ್ಟೆಗಳನ್ನು ಎಸೆದು ಹೋಗದೆ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು.

ಐಗೂರಿನ ಆರ್‍ಎಸ್‍ಎಸ್ ಪ್ರಮುಖರಾದ ಎಂ.ಎ. ಪ್ರಭಾಕರ ಸಿ.ಕೆ. ಅರಸು, ಪಿ.ಎಸ್. ತೇಜಕುಮಾರ್, ಜಿ.ಕೆ. ಅವಿಲಾಷ್, ರಾಧಕೃಷ್ಣ ಟೈಲರ್, ಶಿವೋದ್, ಜಾರ್ಜ್ ಅವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.

ಐಗೂರಿನ ಪ್ರಮುಖ ಜಂಕ್ಷನ್‍ನಲ್ಲಿ ಸ್ವಚ್ಛತಾ ಕಾರ್ಯನಡೆಸುತ್ತಿರುವಾಗ ಅಂಗಡಿ ಮಾಲೀಕರುಗಳಾದ ಗೋವಿಂದ ಜಾರ್ಜ್, ರಾಧಕೃಷ್ಣ ಸಾಥ್ ನೀಡಿದರು.