ಸೋಮವಾರಪೇಟೆ, ಜ. 4: ಸಮೀಪದ ತಲ್ತರೆಶೆಟ್ಟಳ್ಳಿ ಬಗ್ಗನಮನೆಯ ಚಂಗಪ್ಪ ಅವರ ತೋಟದಲ್ಲಿ ಬೆಳೆದಿದ್ದ ಮೂಸಂಬಿಯೊಳಗೆ ಮತ್ತೊಂದು ಮೂಸಂಬಿ ಹಣ್ಣು ಕಂಡು ಬಂದಿದ್ದು, ಅಕ್ಕಪಕ್ಕದವರ ಕುತೂಹಲಕ್ಕೆ ಕಾರಣವಾಯಿತು. ಬಗ್ಗನ ಚಂಗಪ್ಪ ಅವರು ತಮ್ಮ ತೋಟದಲ್ಲಿ ಬೆಳೆದಿದ್ದ ಸಾಧಾರಣ ಗಾತ್ರದ ಮೂಸಂಬಿ ಯನ್ನು ಬಿಡಿಸಿ ನೋಡಿದಾಗ ಅದರೊಳಗೆ ಪುಟ್ಟದೊಂದು ಮೂಸಂಬಿ ಕಂಡುಬಂತು. ಅದರ ಸಿಪ್ಪೆಯನ್ನು ಬಿಡಿಸಿದಾಗ ಅದರೊಳಗೆ ಮೂಡಿದ್ದ ಸಣ್ಣದೊಂದು ಹಣ್ಣು, ಸೃಷ್ಟಿಯ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿತ್ತು.