ಕೂಡಿಗೆ, ಜ. 4: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಆದರ್ಶ ವಿದ್ಯಾರ್ಥಿಗಳ ಸಂಘದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾನೀಯ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ಮಾತನಾಡಿ, ಕೊಡಗಿನ ಗಡಿಗ್ರಾಮ ಶಿರಂಗಾಲದ ಸರ್ಕಾರಿ ಪದವಿಪೂರ್ವ ಕಾಲೇಜು ಶಿಕ್ಷಣವಲಯದಲ್ಲೇ ಹೆಮ್ಮರವಾಗಿ ಬೆಳೆಯುತ್ತಿದೆ.

ಇದರ ಬೆಳವಣಿಗೆಗೆ ಶಿಕ್ಷಕರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಕಲಿಕಾಸಕ್ತಿಯೇ ಕಾರಣ. ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾರ್ಥಿ ಮತ್ತು ಶಿಕ್ಷಕರ ಜೊತೆಯಲ್ಲಿ ಪೆÇೀಷಕರೂ ಬಹಳ ಮುಖ್ಯ ಎಂದರು.

ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಸಿದ್ದಮಾಡಿದರೆ, ಪೆÇೀಷಕರು ತಮ್ಮ ಮಕ್ಕಳನ್ನು ಉತ್ತಮ ನಡವಳಿಕೆಗಳನ್ನು ತುಂಬುವ ಮೂಲಕ ಸಮಾಜಕ್ಕೆ ಉತ್ತಮ ಪೌರರನ್ನು ಕೊಡಲು ಸಾಧ್ಯ. ಆರೋಗ್ಯ ಪೂರ್ಣ ಸಮಾಜಕ್ಕೆ ಶಿಕ್ಷಕರೂ ಪೆÇೀಷಕರೂ ಸಮಾನವಾಗಿ ಶ್ರಮಿಸುತ್ತಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ-ಪೆÇೀಷಕರ ಪೆÇ್ರೀತ್ಸಾಹದ ಜೊತೆಯಲ್ಲಿ ದಾನಿಗಳೂ ಕೂಡ ಆ ಶಾಲೆ ಅಥವಾ ವಿದ್ಯಾರ್ಥಿಗೆ ಆಸರೆಯಾದರೆ ಆ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಯ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲಿದೆ.

ಆ ಹಿನ್ನೆಲೆ ಉತ್ತಮವಾಗಿ ವ್ಯಾಸಂಗ ಮಾಡುವ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬರುವ ವ್ಯಾಸಂಗ ವರ್ಷದಲ್ಲಿ 10 ಸಾವಿರ ರೂ.ಗಳ ದತ್ತಿನಿಧಿ ಸ್ಥಾಪಿಸುವದಾಗಿ ಹೇಳಿದರು.

ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರಿಗೆ, ತಂದೆ-ತಾಯಿಯರಿಗೆ ವಿಧೇಯರಾಗಿ ನಡೆದುಕೊಳ್ಳಬೇಕು, ವಿದ್ಯಾರ್ಥಿಗೆ ವಿನಯತೆ ಬಹಳ ಮುಖ್ಯ ಆ ವಿನಯತೆಯ ಮೌಲ್ಯದಿಂದ ಜ್ಞಾನದ ಮೌಲ್ಯವೂ ಹೆಚ್ಚಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿ ದಿಸೆಯಲ್ಲೇ ಕಲಿಕೆಯ ಪರಿಶ್ರಮ ಮತ್ತು ಸಮಯ ಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ಅದನ್ನು ಸಾದಿಸಲು ಸಾದ್ಯ ಎಂದರು.

ಈ ಸಂದರ್ಭ 2016-17ನೇ ಶೈಕ್ಷಣಿಕ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿಧಿಯಿಂದ ಸಹಾಯಧನ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎನ್.ಬಿ. ಮಹೇಶ್ ವಹಿಸಿದ್ದರು.

ವೇದಿಕೆಯಲ್ಲಿ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್, ಎಸ್.ಜಿ. ಸುಚಿತ್ರ ಬಾಯಿ, ಎಸ್.ಎಲ್. ತಮ್ಮಯ್ಯ, ಸಿ.ಎನ್. ಲೋಕೇಶ್, ಎನ್.ಎನ್. ಶ್ರೀಧರ್, ಕೃಷ್ಣ , ದನೇಂದ್ರ ಕುಮಾರ್, ಪ್ರಾಂಶುಪಾಲ ಎ.ಆರ್. ಸುರೇಶ್ ಕುಮಾರ್ ಇದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಉಪನ್ಯಾಸಕರಾದ ಹಂಡ್ರಂಗಿ ನಾಗರಾಜು, ಕಾವ್ಯಶ್ರೀ, ರಮ್ಯ ನೆರವೇರಿಸಿದರು.