ಮಡಿಕೇರಿ, ಜ. 4: ಗಾಳಿಬೀಡುವಿನ ಒಂದನೇ ಮೊಣ್ಣಂಗೇರಿ ಗ್ರಾಮದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀಶಕ್ತಿ ಗಣಪತಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೂ. 1 ಲಕ್ಷ ನೀಡಲಾಗಿದೆ. ಮಡಿಕೇರಿ ಮತ್ತು ವೀರಾಜಪೇಟೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಧಿಕಾರಿಯಾದ ಸದಾಶಿವಗೌಡ ಅವರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಸ್. ಚಂದ್ರಕುಮಾರ್ ಅವರಿಗೆ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭ ದೇವಾಲಯದ ಮೇಲ್ವಿಚಾರಕ ಹೆಚ್. ಮುಕುಂದ್, ಗಾಳಿಬೀಡು ಒಕ್ಕೂಟದ ಅಧ್ಯಕ್ಷ ಗಂಗಮ್ಮ, ಸೇವಾ ಪ್ರತಿನಿಧಿ ಶೋಭಾ ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಮಡಿಕೇರಿ ತಾಲೂಕಿನ ಹೊರಮಲೆ ಗಾಳಿಬೀಡು ಗ್ರಾಮದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿಯು 1993 ಆಗಸ್ಟ್ 15 ರಂದು ಅಸ್ತಿತ್ವಕ್ಕೆ ಬಂದು ಸುಮಾರು 24 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆ ಯುತ್ತಿದ್ದು, ಜೀರ್ಣೋದ್ಧಾರದ ಪುಣ್ಯ ಕಾರ್ಯಕ್ಕೆ ಭಕ್ತಾದಿಗಳು ತನು, ಮನ, ಧನದ ಸಹಕಾರ ನೀಡುವÀಂತೆ ಸಮಿತಿಯ ಖಜಾಂಚಿ ನವೀನ್ ದೇರಳ ಮನವಿ ಮಾಡಿದ್ದಾರೆ. ಊರಿನಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ನಿರ್ಮಿಸಿದ ಶ್ರೀಮಹಾಗಣಪತಿ ಗುಡಿ ಇಂದು ದೇವಾಲಯವಾಗಿ ಪುನರ್ ನಿರ್ಮಾಣಗೊಳ್ಳುತ್ತಿದೆ.

ಈ ದೇವಾಲಯದಲ್ಲಿ ಶ್ರೀಶಕ್ತಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಕಾರ್ಕಳದಲ್ಲಿ ಶಕ್ತಿ ಗಣಪತಿ ಮೂರ್ತಿಯ ಕೆತ್ತನೆ ಕಾರ್ಯ ಆರಂಭಗೊಂಡಿದೆ. ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ದೇವಾಲಯದ ಅಭಿವೃದ್ಧಿಯಾಗುತ್ತಿದ್ದು, ಆರ್ಥಿಕ ನೆರವು ನೀಡುವವರು ಈ ಖಾತೆ ಸಂಖ್ಯೆಗೆ ಜಮಾ ಮಾಡಬಹುದೆಂದು ನವೀನ್ ದೇರಳ ತಿಳಿಸಿದ್ದಾರೆ. ವಿಜಯ ಬ್ಯಾಂಕ್, ಖಾತೆ ಸಂಖ್ಯೆ : 114701011003834

ಹೆಚ್ಚಿನ ಮಾಹಿತಿಗಾಗಿ ಸಮಿತಿಯ ಅಧ್ಯಕ್ಷ ಚಂದ್ರಕುಮಾರ್ 94813 85501, ಪ್ರಧಾನ ಕಾರ್ಯದರ್ಶಿ ಮನುಕುಮಾರ್ 94818 58868, ಖಜಾಂಚಿ ನವೀನ್ ದೇರಳ 94499 52008 ಸಂಪರ್ಕಿಸಬಹುದು.