ಸಿದ್ದಾಪುರ, ಜ. 4: ಗೋವು ಭಾರತದ ಪ್ರಾಣಿ ಅಲ್ಲ, ಭಾರತದ ಪ್ರಾಣ. ಭಾರತದಲ್ಲಿ ಸಂಪೂರ್ಣ ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಲು ಒತ್ತಾಯಿಸಿ ಮುಂದಿನ ದಿನಗಳಲ್ಲಿ ನನ್ನ ರಕ್ತದಿಂದ ಪ್ರಧಾನ ಮಂತ್ರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಅರ್ಜಿ ಬರೆದು ಮನವಿ ಮಾಡಲಾಗು ವದೆಂದು ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.ಸಿದ್ದಾಪುರದಲ್ಲಿ ಗೋರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಗೋ ಹತ್ಯೆಯು ಭಾರತದ ಪ್ರಾಣ ಹತ್ಯೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತವು ಬಡ ರಾಷ್ಟ್ರವಾಗಲು ಪ್ರಮುಖ ಕಾರಣ ಗೋಹತ್ಯೆಯಾಗಿದೆ ಎಂದ ಅವರು, ವೀರರ ನಾಡಾದ ಕೊಡಗಿನಲ್ಲಿ ಇತ್ತೀಚೆಗೆ ಗೋ ಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆಲ್ಲಾ ಕಾರಣ ವೀರರ ನಾಡಾದ ಕೊಡಗಿನಲ್ಲಿ ಇತ್ತೀಚೆಗೆ ಗೋ ಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆಲ್ಲಾ ಕಾರಣ (ಮೊದಲ ಪುಟದಿಂದ) ಎಕರೆ ಗೋಮಾಳಗಳನ್ನು ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಗೋವಿನ ಮಾಲಿಕರಿಗೆ ಗೋವಿಗೆ ನೀಡಲು ಮೇವಿಲ್ಲದ ಕಾರಣ ಗೋವನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಗೋಮಾಳ ಜಾಗಗಳನ್ನು ಉಳಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ನಡೆಯುವ ಎಲ್ಲಾ ಹೋರಾಟಕ್ಕೆ ರಾಮಚಂದ್ರಾಪುರ ಮಠವು ಸಂಪೂರ್ಣವಾಗಿ ಬೆಂಬಲ ನೀಡುವದಾಗಿ ಘೋಷಿಸಿದರು. ಯುವಕರು ದೇಶದ ಆಸ್ತಿಯಾಗಿದ್ದು ಗೋಹತ್ಯೆಯನ್ನು ತಡೆಯುವಲ್ಲಿ ಯುವಕರ ಪಾತ್ರ ಮುಖ್ಯ ಎಂದರು. ಕೊಡಗಿನಲ್ಲಿ ಕಂಡುಬರುವ ಮಲೆನಾಡು ಗಿಡ್ಡ ಎಂಬ ತಳಿಯ ಹಸುಗಳು ಪಶುಸಂಗೋಪನೆ ಎಂಬ ಬೃಹತ್ ಉದ್ದಿಮೆಯ ಆಗಮನದಿಂದ ಕಸಾಯಿಖಾನೆಗಳ ಪಾಲಾಗುತ್ತಿದೆ. ಮಲೆನಾಡು ಗಿಡ್ಡ ತಳಿಯು ಅತ್ಯುತ್ತಮ ಪೌಷ್ಟಿಕತೆಯ ಹಾಲನ್ನು ನೀಡುವ ತಳಿಯಾಗಿದ್ದು, ಈ ಹಸು ಅಮೃತದ ಸಮಾನವಾದ ಕಡಿಮೆ ಹಾಲನ್ನು ನೀಡುತ್ತಿದೆ. ಆದರೆ ಜೆರ್ಸಿ ಹಸು ಭಾರೀ ಪ್ರಮಾಣದಲ್ಲಿ ಹಾಲನ್ನು ನೀಡುತ್ತಿದ್ದು ದೇಶೀಯ ತಳಿಯ ಹಸುವಿನ ಹಾಲಿನ ಒಂದು ಅಂಶವನ್ನು ಕೂಡ ನೀಡಲು ಸಾಧ್ಯವಿಲ್ಲವೆಂದು ಹೇಳಿದರು. ಮಲೆನಾಡು ತಳಿ ಹಸುಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ‘ಸೇವ್ ಮಲೆನಾಡ್ ತಳಿ ಹಸು’ ಎಂಬ ಅಭಿಯಾನವನ್ನು ಪ್ರಾರಂಭಿಸ ಲಾಗುವದು ಹಾಗೂ ಮಲೆನಾಡು ತಳಿ ಹಸುವನ್ನು ದತ್ತು ತೆಗದುಕೊಳ್ಳುವದಾಗಿ ಘೋಷಣೆ ಮಾಡಿದರು.
ಕಾಶಿ ಕಫಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಮಾತನಾಡಿ, ಗೋವಿಗೆ ನ್ಯಾಯ ಸಿಗುವವರೆಗೂ ಗೋಯಾತ್ರೆಯು ರಾಷ್ಟ್ರವ್ಯಾಪ್ತಿಯಲ್ಲಿ ನಡೆಸಲಾಗುವದು ಎಂದರು. ಅಭಂiÀi ಅಕ್ಷರದ ಮೂಲಕ ರಾಜ್ಯ ಹಾಗೂ ರಾಷ್ಟ್ರ ವ್ಯಾಪ್ತಿಯಲ್ಲಿ ಗೋ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಯಾತ್ರೆಯನ್ನು ಕೈಗೊಂಡಿದ್ದು ರಾಷ್ಟ್ರವ್ಯಾಪ್ತಿ ಆಂದೋಲನವನ್ನು ನಡೆಸಿ ಮುಖ್ಯ ಮಂತ್ರಿ ಹಾಗೂ ಪ್ರಧಾನಿಗೆ ಅಭಯ ಅಕ್ಷರದ ಮೂಲಕ ಮನವಿ ನೀಡಲಾಗುವದು, ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಗೋ ಮಾತೆ ಹಾಗೂ ಮಂಗಳಪಾಂಡೆ ಯಾತ್ರೆಯ ಹೆಸರಿನಲ್ಲಿ ಮುಂಬರುವ ದಿನಗಳಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗು ವದೆಂದ ಅವರು, ದೇಶದ ಸಂವಿಧಾನ ದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಯಾವದೇ ಪ್ರಾಣಿ ಹತ್ಯೆ ಮಾಡಬಾರ ದೆಂದು ಉಲ್ಲೇಖಿಸಿದ್ದರೂ ಕೂಡ ದೇಶದಲ್ಲಿ ಗೋವಿನಂತಹ ಮುಗ್ದ ಪ್ರಾಣಿಗಳ ಹತ್ಯೆ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪೊನ್ನಂಪೇಟೆ ರಾಮಕೃಷ್ಣ ಆಶÀ್ರಮದ ಬೋಧಸ್ವರೂಪ ನಂದಾಜಿಸ್ವಾಮಿಗಳು ಮಾತನಾಡಿ ತಾಯಿಗೆ ಸಮಾನವಾದ ಗೋಮಾತೆಯನ್ನು ಎಲ್ಲರೂ ಸಂರಕ್ಷಿಸಬೇಕೆಂದು ಕರೆ ನೀಡಿದರು. ಗೋವುಗಳು ನಮ್ಮ ಹಿತೈಶಿಗಳಾಗಿದ್ದು ತಾಯಿಯ ಹಾಲಿನಷ್ಟೇ ಹಸುವಿನ ಹಾಲು ಮುಖ್ಯವಾಗಿದ್ದು ಅವುಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕೆಂದರು. ಅಲ್ಲದೆ ಗೋ ಸಂರಕ್ಷಿಸುವ ಮೂಲಕ ಭಾರತೀಯ ಸಂಸ್ಕøತಿಯನ್ನು ಉಳಿಸಿಬೆಳೆಸಬೇಕೆಂದು ಕರೆನೀಡಿದರು.
ತಲಕಾವೇರಿಯ ಆನಂದ ತೀರ್ಥ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ಗೋ ಹತ್ಯೆ ನಿಷೇಧವಿದ್ದರೂ ಕೂಡ ರಾಜ್ಯವನ್ನು ಆಳಿದವರು ಹಾಗೂ ರಾಜಕಾರಣಿಗಳ ಪರೋಕ್ಷ ಬೆಂಬಲದಿಂದ ದೇಶದಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಗೋಹತ್ಯೆಯು ನಿರಂತರವಾಗಿ ನಡೆಯುತ್ತಿದ್ದು ಗೋವಿನ ರಕ್ತ ಹಾಗೂ ತ್ಯಾಜ್ಯಗಳನ್ನು ಪವಿತ್ರ ಕಾವೇರಿಯ ಒಡಲಲ್ಲಿ ಹಾಕುವ ಮೂಲಕ ಗೋಹತ್ಯೆಯೊಂದಿಗೆ ಪವಿತ್ರ ಕಾವೇರಿ ಮಲಿನಗೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದÀರ್ಭದಲ್ಲಿ ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ನೆರೆದಿದ್ದವರಿಗೆ ಗೋ ಸಂರಕ್ಷಣೆಯನ್ನು ಮಾಡುವ ಸಲುವಾಗಿ ಸಂಕಲ್ಪ ಮಾಡಿಸಿ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಸಮಾರಂಭದಲ್ಲಿ ಗೋ ಸಂರಕ್ಷಣಾ ಟ್ರಸ್ಟ್‍ನ ಕಾರ್ಯದರ್ಶಿ ಅನಿತಾ ಪೂವಯ್ಯ, ಪ್ರಾಸ್ತಾವಿಕ ನುಡಿದರು. ಸಭಾ ಕಾರ್ಯಕ್ರಮಕ್ಕ್ಕೂ ಮುನ್ನ ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಿಂದ ಚಂಡೆ ಹಾಗೂ ಮುಕ್ಕೋಡ್ಲುವಿನ ವ್ಯಾಲಿಡ್ಯೂ ತಂಡದಿಂದ ದುಡಿ ಕೊಟ್ಟ್ ಪಾಟ್, ಕಲಸದೊಂದಿಗೆ ಶೋಭಾಯಾತ್ರೆಯು ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಾಲಯದವರೆಗೆ ಸಾಗಿಬಂತು.
ಕೊಡಗು ಜಿಲ್ಲಾ ಗೋ ಪರಿವಾರದ ನೇತೃತ್ವ ಹಾಗೂ ವಿಶ್ವ ಹಿಂದು ಪರಿಷತ್, ಭಜರಂಗದಳದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದÀರ್ಭ ಹಿಂದೂ ಸಂಘಟನೆಯ ಮುಖಂಡರುಗಳಾದ ಉದ್ದಪ್ಪಂಡ ಜಗತ್, ಪ್ರವೀಣ್, ತಾ.ಪಂ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಜೆನೀಶ್, ಪಿ.ಡಿ. ಚೀಯಣ್ಣ, ಎಂ.ಎ. ಆನಂದ, ಪದ್ಮನಾಭ, ಮಂಜು ಇನ್ನಿತರರು ಇದ್ದರು.
ಮಡಿಕೇರಿ : ಗೋಹತ್ಯೆ ನಿಷೇಧ ಮತ್ತು ಭಾರತೀಯ ಗೋ ತಳಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ಇತರ ಸಂತ ಸಾನಿಧ್ಯದಲ್ಲಿ ಹಮ್ಮಿಕೊಂಡಿರುವ ಅಭಯ ಗೋಯಾತ್ರೆ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನತೆಯಲ್ಲಿ ಜಾಗೃತಿ ಮೂಡಿಸಲಾಯಿತು.
ಮಡಿಕೇರಿ ನಗರಕ್ಕೆ ಆಗಮಿಸಿದ ಅಭಯ ಗೋಯಾತ್ರೆಯನ್ನು ನಗರದ ಸುದರ್ಶನ ವೃತ್ತದಲ್ಲಿ ಕೊಡಗು ಗೋ ಪರಿವಾರ ಟ್ರಸ್ಟ್ ವತಿಯಿಂದ ಪುಷ್ಪಾರ್ಚನೆ ಮಾಡುವದರ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಾಗಿತು.
ಈ ಸಂದರ್ಭ ಕೊಡಗು ಗೋ ಪರಿವಾರ ಟ್ರಸ್ಟ್‍ನ ಕಾರ್ಯದರ್ಶಿ ಡಾ. ರಾಜಾರಾಮ್, ಟ್ರಸ್ಟಿ ಬಿ.ಕೆ. ಜಗದೀಶ್, ಹವ್ಯಕ ವಲಯದ ಉಪಾಧ್ಯಕ್ಷ ನಾರಾಯಣ ರಾವ್, ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್, ಈಶ್ವರ ಭಟ್, ಶ್ರೀಪತಿ ಹಾಗೂ ಇತರರು ಇದ್ದರು.
ಸುಂಟಿಕೊಪ್ಪ: ಸುಂಟಿಕೊಪ್ಪಕ್ಕೆ ಆಗಮಿಸಿದ ಅಭಯ ಗೋಯಾತ್ರೆ ಯನ್ನು ಸಂಘಟಕರು ಅಯ್ಯಪ್ಪ ದೇವಾಲಯದ ಬಳಿ ರಥಕ್ಕೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ನಂತರ ಪಟ್ಟಣದಲ್ಲಿ ಗೋವು ರಕ್ಷಿಸಿ ಗೋಹತ್ಯೆ ನಿಲ್ಲಿಸಿ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭ ಗೋಹತ್ಯೆ ನಿಷೇಧಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಸಹಿ ಸಂಗ್ರಹಿಸಲಾಯಿತು.
ಈ ಸಂದರ್ಭ ಗೋರಕ್ಷಕ ಸಮಿತಿಯ ಪದಾಧಿಕಾರಿಗಳಾದ ಎಂ.ಎನ್. ಹರೀಶ್, ನಾರಾಯಣ ಭಟ್, ಗೋಪಾಲಕೃಷ್ಣ ಭಟ್, ಯಂಕನ ಕರುಂಬಯ್ಯ, ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ, ನಗರ ಕಾರ್ಯದರ್ಶಿ ಬಿ.ಕೆ.ಪ್ರಶಾಂತ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ ಹಾಗೂ ಮಾತೃ ಮಂಡಳಿ ಸದಸ್ಯೆಯರು ಉಪಸ್ಥಿತರಿದ್ದರು.