ಮಡಿಕೇರಿ, ಜ.4 : ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗು ಜಿಲ್ಲಾ ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆ ಹಾಗೂ ಸೂರ್ಲಬ್ಬಿ ನಾಡಿನ ಸಹಯೋಗದಲ್ಲಿ ತಾ.6ರಂದು (ನಾಳೆ) ಸೂರ್ಲಬ್ಬಿ ಶಾಲಾ ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ.ಕ್ರೀಡಾಕೂಟದ ಉದ್ಘಾಟನೆಯನ್ನು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಟಿ.ತಿಮ್ಮೇಗೌಡ ನೆರವೇರಿಸಲಿದ್ದು, ಜಾನಪದ ವಿದ್ವಾಂಸರು, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕಾಳೇಗೌಡ ನಾಗಾವರ, ದಿಕ್ಸೂಚಿ ಭಾಷÀಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತÀÀಶಯನ ವಹಿಸಲಿದ್ದಾರೆ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸೋಮವಾರಪೇಟೆ ತಾ.ಪಂ ಉಪಾಧ್ಯಕ್ಷ ಎಂ.ಬಿ ಅಭಿಮನ್ಯು ಕುಮಾರ್, ಮಡಿಕೇರಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ಗಾಳೀಬೀಡು ಗ್ರಾ.ಪಂ. ಅಧ್ಯಕ್ಷ ಪುದಿಯತಂಡ ಸುಭಾಷ್ ಸೋಮಯ್ಯ, ಸದಸ್ಯ ಎಂ.ಎಂ ರಮೇಶ್, ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಕನ್ನಕಂಡ ಸುಭಾಷ್, ಉಪಾಧ್ಯಕ್ಷ ಸಿ.ಜಿ. ಪಳಂಗಪ್ಪ, ಸದÀಸ್ಯೆ ಮಾಯಮ್ಮ, ಸೂರ್ಲಬ್ಬಿ ನಾಡಿನ ಅಧ್ಯಕ್ಷ ಮುದ್ದಂಡ ತಿಮ್ಮಯ್ಯ,
(ಮೊದಲ ಪುಟದಿಂದ) ತಕ್ಕರಾದ ಮೇದುರ ಪೂವಯ್ಯ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳಾದ ರೆಗ್ಗೆ, ತೆಂಗೆಪೋರ್, ಗೋಣಿಚೀಲ ಓಟ, ಹಗ್ಗಾಜಗ್ಗಾಟ, ಮಡಿಕೆ ಒಡೆಯುವದು, ಹುಲ್ಲು ಕಟ್ಟುವ ಸ್ಪರ್ಧೆ, ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವದು, ಮಹಿಳಾ ಕಬಡ್ಡಿ ಮುಂತಾದ ಪೈಪೋಟಿ ನಡೆಯಲಿದೆ. ಜಾನಪದ ಪ್ರಶಸ್ತಿಗೆ ಭಾಜನರಾಗಿರುವ ಕೊಡಗು ಜಾನಪದ ಪರಿಷತ್ ಉಪಾಧ್ಯಕ್ಷೆ ರಾಣಿಮಾಚಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿ ಆಯ್ಕೆಯಾಗಿರುವ ಫ್ಯಾನ್ಸಿ ಮುತ್ತಣ್ಣ ಸೇರಿದಂತೆ ಸೂರ್ಲಬ್ಬಿ ನಾಡಿನ ವಿವಿಧ ಗ್ರಾಮಗಳ ಹಿರಿಯರನ್ನು ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಗ್ರಾಮೀಣ ಕ್ರೀಡಾಕೂಟ ಸಂಬಂಧ ಮೂರ್ನಾಲ್ಕು ಪೂರ್ವಾಭಾವಿ ಸಭೆಗಳನ್ನು ಈಗಾಗಲೆ ನಡೆಸಲಾಗಿದ್ದು, ತಾ. 2 ರಂದು ಅಂತಿಮ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಯನ್ನು ಅಂತಿಮಗೊಳಿಸ ಲಾಗಿದೆ. ಈ ವೇಳೆ ಸೂರ್ಲಬ್ಬಿ, ಮುಟ್ಲು, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ ಹಾಗೂ ಹಚ್ಚಿನಾಡು ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಭೆಯಲ್ಲಿ ಕೊಡಗು ಜಾನಪದ ಪರಿಷತ್‍ನ ಜಿಲ್ಲಾಧ್ಯಕ್ಷರಾದ ಬಿ.ಜಿ.ಅನಂತಶಯನ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಸೂರ್ಲಬ್ಬಿ ನಾಡಿನ ಅಧ್ಯಕ್ಷ ಎಂ.ಎಸ್. ತಿಮ್ಮಯ್ಯ, ಗರ್ವಾಲೆ ಗ್ರಾ.ಪಂ. ಉಪಾಧ್ಯಕ್ಷ ಸಿ.ಜಿ.ಪಳಂಗಪ್ಪ, ನಾಡತಕ್ಕ ಪೂವಯ್ಯ, ಎಸ್‍ಡಿಎಂಸಿ ಅಧ್ಯಕ್ಷ ಯೋಗಾತ್ಮ, ಮುಖ್ಯಶಿಕ್ಷಕರುಗಳಾದ ಸುಂದರಿ, ವೆಂಕಟೇಶ್ ನಾಯಕ್, ಚಾಮೇರ ದಿನೇಶ್, ತಂಬುಕುತ್ತೀರ ಸೋಮಯ್ಯ, ಮುದ್ದಂಡ ಪೊನ್ನವ್ವ ಮೊದಲಾದವರು ಪಾಲ್ಗೊಂಡಿದ್ದರು.