ನಾಪೋಕ್ಲು, ಜ. 4: ಕಕ್ಕಬ್ಬೆ-ಕುಂಜಿಲ ಪೈನರಿ ಮಸೀದಿ ಸಮೀಪ ತಾ.2ರಂದು ರಾತ್ರಿ ಅಕ್ರಮ ಮರ ಸಾಗಾಟವಾಗುತ್ತಿರುವ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸ್ಥಳದಲ್ಲಿದ್ದ (ಕೆ.ಎ.12 ಎ 921) ನೋಂದಾವಣೆಯ 10 ಚಕ್ರದ ಲಾರಿ ಮತ್ತು ಅದರಲ್ಲಿದ್ದ ವಿವಿಧ ಜಾತಿಯ ಮರದ ನಾಟಾಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಅರಣ್ಯ ಇಲಾಖೆಯ ಎಸಿಎಫ್ ಕೆ.ಎ.ನೆಹರು, ಭಾಗಮಂಡಲ ಆರ್.ಎಫ್.ಎಂ.ಎಸ್.ಚಂಗಪ್ಪ.ಕಕ್ಕಬ್ಬೆ ಡಿ.ಆರ್.ಎಫ್.ಓ. ಎಂ.ಬಿ.ಸುರೇಶ್, ಅರಣ್ಯ ರಕ್ಷಕರಾದ ಕಾಳೇಗೌಡ, ಪ್ರವೀಣ್ ಕುಮಾರ್, ವಾಗೀಶಯ್ಯ, ರವಿ ಒ.ಬಿ., ಎನ್.ಎ. ದೇವಾನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.