ಮಡಿಕೇರಿ, ಜ. 4: ಭಾಗಮಂಡಲ ಸನಿಹದ ಚೇರಂಗಾಲದಲ್ಲಿ ಲೋಪಾಮುದ್ರೆ ಕಾವೇರಿ ಹುಟ್ಟಿದ್ದು ಆಡಿ ಬೆಳೆದಿದ್ದ ಸ್ಥಳ ಎಂದು ಇತಿಹಾಸ ಹೊಂದಿರುವ ಸ್ಥಳ ‘ಕನ್ನಿ ಕುಂಡ್’ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಈ ಕ್ಷೆತ್ರ ಜೀರ್ಣೋದ್ಧಾರ ಕಾಣುತ್ತಿದೆ. ಶ್ರೀ ಕನ್ನಿಕಾವೇರಿ ಸೇವಾ ಟ್ರಸ್ಟ್ ಎಂಬ ಸಂಸ್ಥೆ 2011ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಈ ಟ್ರಸ್ಟ್‍ನ ಮೂಲಕ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಇತ್ತೀಚೆಗೆ ಚಾಲನೆಯೂ ನೀಡಲಾಗಿದೆ. ಈ ಸ್ಥಳದಲ್ಲಿ ವಿಶೇಷವಾದ ಶಕ್ತಿ ಇದೆ ಎಂಬದನ್ನು ಅರಿತು ಪಾಳು ಬಿದ್ದಂತಿದ್ದ ಈ ಸ್ಥಳದಲ್ಲಿ ಓರ್ವ ವ್ಯಕ್ತಿ ಹಲವಾರು ವರ್ಷದಿಂದ ಏಕಾಂಗಿಯಾಗಿ ತಮ್ಮ ಕೈಲಾದ ಮಟ್ಟಿಗೆ ಪೂಜೆ ನೆರವೇರಿಸಿಕೊಂಡು ಬಂದಿದ್ದರು.

(ಮೊದಲ ಪುಟದಿಂದ) ಇವರು ಚೇರಂಗಾಲದ ಅರೆಭಾಷೆ ಗೌಡ ಜನಾಂಗಕ್ಕೆ ಸೇರಿದವರಾದ ಹೊಸೂರು ಎಂ. ನಾಣಯ್ಯ. ವಯಸ್ಸಿನ ಕಾರಣದಿಂದ ಇವರು ಇದನ್ನು ಮುಂದುವರಿಸಲು ಪ್ರಯಾಸ ಪಡುತ್ತಿದ್ದ ಸಂದರ್ಭದಲ್ಲಿ ಈ ಸ್ಥಳದ ಶಕ್ತಿಯನ್ನು ಅರಿತ ಕೆಲವರು ಕೈಜೋಡಿಸಿದ್ದು, 2011ರಲ್ಲಿ ಕನ್ನಿ ಕಾವೇರಿ ಸೇವಾ ಟ್ರಸ್ಟ್ ಅನ್ನು ರಚಿಸಲಾಗಿದೆ. ಈ ಟ್ರಸ್ಟ್‍ನ ಅಧ್ಯಕ್ಷರನ್ನಾಗಿ ಹೊಸೂರು ನಾಣಯ್ಯ ಅವರನ್ನೇ ನೇಮಕ ಮಾಡಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಕನ್ನಿಕುಂಡ್‍ನಲ್ಲಿ ಜೀರ್ಣೋದ್ಧಾರ ಕೆಲಸಕ್ಕೆ ಚಾಲನೆ ನಿಡಿದ ಸಮಯದಲ್ಲಿ ಹೊಸೂರು ನಾಣಯ್ಯ ಅವರು ತೀರಾ ಅನಾರೋಗ್ಯಕ್ಕೆ ಈಡಾಗಿದ್ದರೂ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಇದೀಗ 26.12.2017ರಂದು ನಾಣಯ್ಯ ಅವರು ಇಹಲೋಕ ತ್ಯಜಿಸಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಕನ್ನಿಕಾವೇರಿ ಸೇವಾ ಟ್ರಸ್ಟ್‍ನ ಪದಾಧಿಕಾರಿಗಳೇ ಮುಂದೆ ನಿಂತು ಎಲ್ಲಾ ವಿಧಿ ವಿಧಾನಗಳೊಂದಿಗೆ ಅವರ ಪತ್ನಿಯನ್ನು ಅಂತ್ಯ ಸಂಸ್ಕಾರ ಮಾಡಿದ್ದ ಸ್ಥಳದ ಬದಿಯಲ್ಲಿಯೇ ನೆರವೇರಿಸಿದ್ದಾರೆ. ಸ್ಥಳೀಯವಾಗಿ ನಾಣಯ್ಯ ಅವರಿಗೆ ಹೆಚ್ಚು ಸಹಕಾರ ಇಲ್ಲದ ಕಾರಣ ತಾವುಗಳೇ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದೆವು. ಅವರು ಮೃತಪಟ್ಟ ಸಂದರ್ಭದಲ್ಲೂ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ತಾವೇ ಮುಂದೆ ನಿಂತು ಅಂತ್ಯಕ್ರಿಯೆಯನ್ನೂ ಸಕಲ ವಿಧಿ ವಿಧಾನಗಳೊಂದಿಗೆ ನೆರವೇರಿಸಿರು ವದಾಗಿ ಟ್ರಸ್ಟ್‍ನ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರು ತಿಳಿಸಿದ್ದಾರೆ. ಇದೀಗ ನಾಣಯ್ಯ ಅವರ ತಿಥಿ ಕರ್ಮಾಂತರವನ್ನು ಕನ್ನಿ ಕಾವೇರಿ ಸೇವಾ ಟ್ರಸ್ಟ್‍ನ ಮೂಲಕವೇ ಅವರ ಜಾಗದಲ್ಲೇ ನಡೆಸಲಾಗುತ್ತಿದೆ. ಇದಕ್ಕಾಗಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿದ್ದು, ಸಾವಿನ ಸಂದರ್ಭ ಆಗಮಿಸಿದವರೆಲ್ಲರಿಗೂ ನೀಡಲಾಗಿದೆ.

ಯೋಗಕ್ಷೇಮ ನೋಡಿಕೊಳ್ಳುತ್ತಿದ್ದೆವು. ಅವರು ಮೃತಪಟ್ಟ ಸಂದರ್ಭದಲ್ಲೂ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ತಾವೇ ಮುಂದೆ ನಿಂತು ಅಂತ್ಯಕ್ರಿಯೆಯನ್ನೂ ಸಕಲ ವಿಧಿ ವಿಧಾನಗಳೊಂದಿಗೆ ನೆರವೇರಿಸಿರು ವದಾಗಿ ಟ್ರಸ್ಟ್‍ನ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರು ತಿಳಿಸಿದ್ದಾರೆ. ಇದೀಗ ನಾಣಯ್ಯ ಅವರ ತಿಥಿ ಕರ್ಮಾಂತರವನ್ನು ಕನ್ನಿ ಕಾವೇರಿ ಸೇವಾ ಟ್ರಸ್ಟ್‍ನ ಮೂಲಕವೇ ಅವರ ಜಾಗದಲ್ಲೇ ನಡೆಸಲಾಗುತ್ತಿದೆ. ಇದಕ್ಕಾಗಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿದ್ದು, ಸಾವಿನ ಸಂದರ್ಭ ಆಗಮಿಸಿದವರೆಲ್ಲರಿಗೂ ನೀಡಲಾಗಿದೆ.