ಗುಡ್ಡೆಹೊಸೂರು, ಜ. 4: ಇಲ್ಲಿಗೆ ಸಮೀಪದ ಬಸವನಹಳ್ಳಿಯ ದಿಡ್ಡಳ್ಳಿ ನಿರಾಶ್ರಿತರ ಶಿಬಿರದ 144 ಕುಟುಂಬದವರಿಗೆ ಗುಡ್ಡೆಹೊಸುರು ಗ್ರಾ.ಪಂ. ವತಿಯಿಂದ ಒಟ್ಟು 288 ಕಸದ ಬುಟ್ಟಿಗಳನ್ನು ಉಚಿತವಾಗಿ ವಿತರಿಸಲಾಯಿತು. ಮನೆಯಲ್ಲಿರುವ ಕಸಗಳನ್ನು ಎಲ್ಲೆಂದರೆಲ್ಲಿ ಬಿಸಾಡದೆ ತಮ್ಮತಮ್ಮ ಮನೆಯ ಮುಂದೆ ಇಟ್ಟು ಕಸವನ್ನು ಹಾಕಿ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಪ್ರತಿ ಮನೆಗೂ ಎರಡು ಕಸದ ಬುಟ್ಟಿಗಳನ್ನು ನೀಡಲಾಗಿದ್ದು, ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ವಿತರಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ಲೀಲಾವತಿ, ಪಿ.ಡಿ.ಓ. ಶ್ಯಾಂ, ಕಾರ್ಯದರ್ಶಿ ನಂಜುಂಡ, ಲೆಕ್ಕಾಧಿಕಾರಿ ಕೀರ್ತಿ ಮತ್ತು ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಹಾಜರಿದ್ದರು.