ಗೋಣಿಕೊಪ್ಪ ವರದಿ, ಜ. 4: ಬೆಂಗಳೂರು ಟೆಕ್ವಾಂಡೋ ಸಂಸ್ಥೆ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ಕೊಡಗಿನ ಕರಾಟೆ ಪಟುಗಳು ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಬೆಂಗಳೂರು ಮಂತ್ರಿಮಾಲ್ ಗುಂಡೂರಾವ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಕೊಡಗಿನ ಐವರು ಕ್ರೀಡಾಪಟುಗಳು ಪದಕ ಪಡೆದುಕೊಂಡರು. 14 ವಯೋಮಿತಿಯ ವಿಭಾಗದಲ್ಲಿ ಪೊನ್ನಂಪೇಟೆ ಸಾಯಿಶಂಕರ್ ಶಾಲೆ ವಿದ್ಯಾರ್ಥಿಗಳಾದ ಅಭಿಷೇಕ್‍ಗೆ 1 ಚಿನ್ನ, ದರ್ಶನ್ ಹಾಗೂ ಗಿರಿಧರ್ ಬೆಳ್ಳಿ, 10 ರ ವಯೋಮಿತಿಯಲ್ಲಿ ಗೋಣಿಕೊಪ್ಪ ಲಯನ್ಸ್ ಶಾಲೆಯ ವಿವೇಕ್‍ಗೆ ಬೆಳ್ಳಿ, ಕಾಪ್ಸ್‍ನ ಆರ್ಯ ಬೆಳ್ಳಿ ಪದಕ ಪಡೆದುಕೊಂಡರು. ತರಬೇತುದಾರ ಶಿವು ತರಬೇತಿ ನೀಡಿದ್ದರು.