ಕೂಡಿಗೆ, ಜ. 3: ಕೂಡಿಗೆ-ಕುಶಾಲನಗರ ರಸ್ತೆ ಮಧ್ಯೆ ಕಳೆದ 15 ದಿನಗಳ ಹಿಂದೆ ಬೈಕ್ ಅಪಘಾತ ದಲ್ಲಿ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದ ನಾಗರತ್ನ (30) ಅವರಿಗೆ ರಸ್ತೆಗೆ ಬಿದ್ದು ಗಾಯಗಳಾಗಿದ್ದವು. ಚಿಕಿತ್ಸೆ ಫಲಕಾರಿಯಾಗದೆ ನಾಗರತ್ನ ಇಂದು ತೀರಿಕೊಂಡಿದ್ದಾರೆ. ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿ ದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.