ಮಡಿಕೇರಿ, ಜ.3 : ಮಡಿಕೇರಿ ಯಲ್ಲಿ ತಾ. 7 ರಂದು ಅಂತರ ರಾಷ್ಟ್ರೀಯ ಮನ್ನಣೆ ಗಳಿಸಿರುವ ಖ್ಯಾತ ಕಲಾವಿದರಿಂದ ವಿನೂತನವಾದ ಜಾಜ್ ಸಂಗೀತ ಕಾಂiರ್ರ್Àಕ್ರಮ ಆಯೋಜಿತವಾಗಿದೆ. ಹೆಸರಾಂತ ಲಾರ್ಸ್ ಮೊಲ್ಲರ್, ಥೋರ್ ಮ್ಯಾಡ್ಸನ್ ಮತ್ತು ಜೊನ್ಸ್ ಜೋಹಾನ್ಸನ್ ಇವರ ಟ್ರಯೋ ತಂಡದಿಂದ ಈ ಜಾಜ್ ಪ್ರದರ್ಶನ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಜರುಗುತ್ತಿದೆ.
ಭಾರತೀಯ ವಿದ್ಯಾಭವನ ಸ್ಪಿಕ್ ಮೆಕೆ ಕೊಡಗು ಘಟಕ ಆಯೋಜಿ ಸುತ್ತ ಬಂದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ಅಂಗವಾಗಿ ಈ ವಿನೂತನ ಜಾಜ್ ಕಾರ್ಯಕ್ರಮ ಸಂಜೆ 6.30 ಗಂಟೆಗೆ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆಯಲಿದೆ. ಗ್ರಾಮಿ ಪ್ರಶಸ್ತಿ ವಿಜೇತ ಸ್ಯಾಕ್ಸೋಫೆÇೀನ್ ವಾದಕ ಲಾರ್ಸ್ ಮೊಲ್ಲರ್ ಹುಟ್ಟು ಹಾಕಿದ ತಂಡ ‘ಜಾಜ್ ಎಕ್ಸ್‍ಫ್ಲೋರರ್ ‘ಟ್ರಯೋ’ ತಂಡವು ಜಾಜ್ ಕಾರ್ಯಕ್ರಮ ನಡೆಸಿಕೊಡುತ್ತದೆ. ಸ್ಯಾಕ್ಸೋಫೆÇೀನ್ ವಾದಕ ಲಾರ್ಸ್ ಮೊಲ್ಲರ್ ಜೊತೆಗೆ ಗಿಟಾರ್ ವಾದಕ ಥೋರ್ ಮ್ಯಾಡ್ಸನ್ ಮತ್ತು ಡ್ರಮ್ಮರ್ ಜೊನ್ಸ್ ಜೋಹಾನ್ಸನ್ ಸೇರಿ ರೂಪಿಸಿರುವ ಈ ‘ಟ್ರಯೋ’ ಜಾಜ್ ಪರಂಪರೆಯು ಆಳವಾದ ಜ್ಞಾನದೊಂದಿಗೆ ಅದನ್ನು ಇಪ್ಪತ್ತೊಂದ ನೆಯ ಶತಮಾನಕ್ಕೆ ಅಳವಡಿಸಿ ಪ್ರಸ್ತುತಪಡಿಸುವ ಸೃಜನಶೀಲತೆಯನ್ನು ಹೊಂದಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ.