ಮಡಿಕೇರಿ, ಜ. 3: ಕುಂಜಿಲ ಪಯ್ನರಿ ಜಮಾಅತ್ ಆಶ್ರಯದಲ್ಲಿ ಪ್ರತಿ ತಿಂಗಳಿನಲ್ಲಿ ನಡೆಸುತ್ತಿರುವ ಮಾಸಿಕ ಸ್ವಲಾತ್ ತಾ. 5 ರಂದು ಸಂಜೆ ಪಯ್ನರಿ ದರ್ಗಾ ಆಡಿಟೋರಿಯಂನಲ್ಲಿ ನಡೆಯಲಿದೆ. ಅಸ್ಸಯ್ಯದ್ ಮುಹ್ಸಿನ್ ಸೈದಲವಿ ಕೋಯಾ ಅಲ್ಬುಖಾರಿ ಸ್ವಲಾತ್ ಮಜ್ಲಿಸ್ಗೆ ನೇತೃತ್ವ ವಹಿಸಲಿದ್ದು, ಮುಬಶ್ಶಿರ್ ಅಹ್ಸನಿಅಲ್ ಕಾಮಿಲಿ ಉಪನ್ಯಾಸ ನೀಡಲಿದ್ದಾರೆ.