ಮಡಿಕೇರಿ, ಜ.3 : ಕಡಗದಾಳು ಗ್ರಾಮದ ಕಾರ್ನರ್ ಫ್ರೆಂಡ್ಸ್ ಸಂಘÀದ ವತಿಯಿಂದ 4ನೇ ವರ್ಷದ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಕಡಗದಾಳು ಶಾಲಾ ಮೈದಾನದಲ್ಲಿ ತಾ. 5 ಮತ್ತು 6 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಿನು ಸೋಮಣ್ಣ, ಎರಡು ದಿನಗಳ ಕಾಲ ನಡೆಯಲಿರುವ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ತಾ. 5 ರಂದು ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಬೆಳೆಗಾರ ಕೆಚ್ಚೆಟ್ಟಿರ ಮಂಜು ಅಚ್ಚಯ್ಯ, ಮುಖ್ಯ ಶಿಕ್ಷಕರುಗಳಾದ ನೀಲಮ್ಮ, ಗಂಗಮ್ಮ, ಬೆಳೆಗಾರ ಮಂದೆಯಂಡ ದೊರೆ ಬಿದ್ದಪ್ಪ, ಮನು ಬೋಪಣ್ಣ, ರಮೇಶ್ ರೈ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ತಾ. 6 ರಂದು ಸಂಜೆ 5.30 ಗಂಟೆಗೆ 4ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಲಿದ್ದು, ಅತಿಥಿಗಳಾಗಿ ತಾಪಂ ಸದಸ್ಯ ಅಪ್ರು ರವೀಂದ್ರ, ಕಡಗದಾಳು ಗ್ರಾ.ಪಂ. ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ, ಉದ್ಯಮಿ ದೇವಯ್ಯ, ಬೆಳೆಗಾರ ರ್ಯಾಲಿ ಬಿದ್ದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಭಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿರುವರು. ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೇರಳ ಮತ್ತು ಕರ್ನಾಟಕದ ಒಟ್ಟು 8 ತಂಡಗಳು ಪಾಲ್ಗೊಳ್ಳಲಿರುವದಾಗಿ ಹೇಳಿದರು.
ಅಂದು ಬೆಳಗ್ಗೆ 10.30 ಗಂಟೆಗೆ ಕೊಡಗಿನ ತಂಡಗಳ ನಡುವೆ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ ಜಿಲ್ಲಾ ವ್ಯಾಪ್ತಿಯ 12 ತಂಡಗಳು ಪಾಲ್ಗೊಳ್ಳಲಿದ್ದು, ಪ್ರತಿ ತಂಡದಲ್ಲಿ ಇಬ್ಬರು ಅತಿಥಿ ಆಟಗಾರರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.ಇದರಲ್ಲಿ ವಿಜೇತ ತಂಡ ಅಂತಿಮ ಪಂದ್ಯದಲ್ಲಿ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆಯೆಂದು ದಿನು ಸೋಮಣ್ಣ ಮಾಹಿತಿ ನೀಡಿದರು.
ಪಂದ್ಯಾವಳಿ ವಿಜೇತ ತಂಡಕ್ಕೆ 20 ಸಾವಿರ ರೂ., ದ್ವಿತೀಯ ಸ್ಥಾನ ತಂಡಕ್ಕೆ 14 ಸಾವಿರ, 3ನೇ ಸ್ಥಾನ ಪಡೆಯುವ ತಂಡಕ್ಕೆ 8 ಸಾವಿರ ಮತ್ತು 4ನೇ ಬಹುಮಾನವಾಗಿ 4 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವದೆಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ತಾ. 5 ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9480084330, 8861350952, 7760895087 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘÀದ ಸಲಹೆಗಾರ ಜಲೀಲ್, ಹಾಗೂ ಉಪಾಧ್ಯಕ್ಷ ಸುಜಿನ್ ಉಪಸ್ಥಿತರಿದ್ದರು.