ಪೊನ್ನಂಪೇಟೆ ಕುಂದ ರಸ್ತೆಯ ನಿವಾಸಿ ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಕರ್ತಮಾಡ ಟಿ. ಸುಬ್ಬಯ್ಯ (94) ಅವರು ತಾ. 2 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 3 ರಂದು (ಇಂದು) ಮೃತರ ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಪತ್ನಿ, ಈರ್ವರು ಪುತ್ರರನ್ನು ಅಗಲಿದ್ದಾರೆ.
ಟಪೊನ್ನಂಪೇಟೆ ತ್ಯಾಗರಾಜ ರಸ್ತೆಯ ನಿವಾಸಿ, ಅಜ್ಜಿಕುಟ್ಟೀರ ದಿ. ಮಾಚಯ್ಯ ಅವರ ಪತ್ನಿ ಚಿಣ್ಣಮ್ಮ (84) ಅವರು ತಾ. 1 ರಂದು ನಿಧನರಾದರು. ಮೃತರು ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
ಟಶನಿವಾರಸಂತೆ ಸಮೀಪದ ಸುಳುಗಲೆ ಗ್ರಾಮದ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಸ್.ಎಸ್. ಶಿವಾನಂದ ಅವರ ತಂದೆ ಶೇಷಪ್ಪ (81) ಅವರು ತಾ. 2 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ಶನಿವಾರಸಂತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರು ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ.