ಕೂಡಿಗೆ, ಜ. 1: ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿನ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿರುವ ಕಾವೇರಿ ಹೊಳೆ ದಂಡೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕನೋರ್ವ ನೀರುಪಾಲಾಗಿರುವ ಘಟನೆ ನಡೆದಿದೆ.ಮೈಸೂರು ಜಿಲ್ಲೆ ಬಿಳಿಕೆರೆ ಸಮೀಪದ ದೊಡ್ಡಬಿತ್ತನಳ್ಳಿಯ ಅಶೋಕ್ ರಾಜ್ ಅರಸ್ ಹಾಗೂ ಆಶಾಮಣಿ ದಂಪತಿಗಳ ಪುತ್ರ ಚರಣ್ ರಾಜ್ ಅರಸ್(24) ಮೃತ ಯುವಕ.
ಹೊಸ ವರ್ಷಾಚರಣೆಗೆಂದು ಕಣಿವೆಯಲ್ಲಿರುವ ತನ್ನ ಅಜ್ಜಿಯ ಮನೆಗೆ ತನ್ನ ಸ್ನೇಹಿತರೊಡನೆ ಬಂದಿದ್ದ ಮೃತ ಚರಣ್ ರಾಜ್ ಅರಸ್ ರಾತ್ರಿ ಹೊಸವರ್ಷದ ಸಂಭ್ರಮದಲ್ಲಿ ಭಾಗಿಯಾಗಿ, ಬೆಳಿಗ್ಗೆ ಸ್ನೇಹಿತರೊಡನೆ ಸಮೀಪದಲ್ಲೆ ಇದ್ದ ಕಾವೇರಿ ಹೊಳೆದಂಡೆಯಲ್ಲಿ ಸ್ನಾನಕ್ಕೆ ತೆರಳಿದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಕುಶಾಲನಗರ ಗ್ರಾಮಾಂತರ ಪೆÇೀಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನ ಸ್ನೇಹಿತರಾದ ಧರ್ಮ, ಸುನಿಲ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.