ವೀರಾಜಪೇಟೆ, ಜ. 1: ಕೇರಳದ ಉಳಿಕಲ್ನಲ್ಲಿರುವ ಆದಿ ಬೈತೂರಪ್ಪ ದೇವಾಲಯದಲ್ಲಿ ತಾ. 22 ರಿಂದ 26 ರವರೆಗೆ ಬೈತೂರು ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ತಕ್ಕ ಪುಗ್ಗೆರ ಪೊನ್ನಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊನ್ನಪ್ಪ ಅವರು, ಬೈತೂರಪ್ಪ ದೇವಾಲಯದಲ್ಲಿ ತಾ. 22 ರಂದು ಪುಗ್ಗೆರ ಮನೆಯಿಂದ ಎತ್ತುಪೋರಾಟ, ತಾ. 23 ರಂದು ರಾತ್ರಿ 8 ಗಂಟೆಗೆ 1001 ತೆಂಗಿನಕಾಯಿ ಒಡೆಯುವದು, ತಾ. 24 ರಂದು ದೊಡ್ಡ ಹಬ್ಬ ತಾ. 25 ರಂದು ಕೊಡಗಿನ ದೇವರುಗಳ ದರ್ಶನ. ತಾ. 26 ರಂದು ಆನೆ ಅಂಬಾರಿಯ ಮೇಲೆ ದೇವರನ್ನು ಹೊತ್ತು ತರುವ ಅರಾಟ್ ಉತ್ಸವ ನಡೆಯಲಿದೆ ಎಂದು ಹೇಳಿದರು. ಪುಗ್ಗೆರ ರಂಜಿ ದೇವಯ್ಯ ಮಾತನಾಡಿ, ತಾ. 1 ರಂದು ದೇವಣಗೇರಿ ತಲಗಟಗೇರಿ ಪುಗ್ಗೆರ ಐನ್ಮನೆ, ತಾ. 2 ರಂದು ಸಂಜೆ ತೇಲಪಂಡ ಐನ್ಮನೆ, ಬೇರೆರ ಕೈಮಡ, ಕುಂಜಲಗೇರಿ ಮುಕ್ಕಾಟ್ಟಿರ ಐನ್ಮನೆ, ತಾ. 4 ರಂದು ಅರಮೇರಿ ಭಗವತಿ ದೇವಸ್ಥಾನ, ತಾ. 5 ರಂದು ಅರಮೇರಿ ಪಾಲೆಕಂಡ ಐನ್ಮನೆ, ತಾ. 6 ರಂದು ಕೆದಮುಳ್ಳೂರು ಚಾಮುಂಡಿ ದೇವಸ್ಥಾನ, ಸಂಜೆ ಕದನೂರು ಚೋಕಂಡ ಐನ್ಮನೆ, ತಾ. 7 ರಂದು ಕೊಡಂದೆರ ಐನ್ಮನೆ, ತಾ. 8 ರಂದು ಬಾಳುಗೋಡು ಮಾಚೆಟ್ಟಿರ ಐನ್ಮನೆ, ತಾ. 9 ರಂದು ಕಾಳಿ ದೇವಸ್ಥಾನ, ತಾ. 10 ರಂದು ಅಮ್ಮಣಕುಟ್ಟಂಡ ಮನೆಗೆ ತೆರಳಿ ಬೈತೂರಿಗೆ ಮರಳಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ನಂದಾ ಗಣಪತಿ, ನಂದಾ ಸುಬ್ಬಯ್ಯ, ಪ್ರವೀಣ್ ಅಯ್ಯಪ್ಪ, ಮೋಹನ್ದಾಸ್, ಸಿ.ಕೆ. ಸತೀಶ್ ಬಾಬು, ರಾಮಕೃಷ್ಣ, ವೇಣು ನಂಬಿಯಾರ್ ಉಪಸ್ಥಿತರಿದ್ದರು.