ನಾಪೆÇೀಕ್ಲು, ಜ. 1: ಕಳೆದ 25 ವರ್ಷಗಳಿಂದ ಪಂಚಾಯಿತಿ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ನಾಟೋಳಂಡ ಚರ್ಮಣ್ಣ ಅವರನ್ನು ಕಕ್ಕಬೆ-ಕುಂಜಿಲ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿದ ಚರ್ಮಣ್ಣ ಮಾತನಾಡಿ, ತನ್ನ ಕರ್ತವ್ಯದ ಅವಧಿಯಲ್ಲಿ ಎಲ್ಲರೊಂದಿಗೆ ಸ್ನೇಹ ಭಾವದಿಂದ ಉತ್ತಮ ಕೆಲಸ ನಿರ್ವಹಿಸಿದ ತೃಪ್ತಿ ಇದೆ. ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲದೆ ಕೆಲಸ ನಿರ್ವಹಿಸಿದ್ದೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಕ್ಕಬೆ-ಕುಂಜಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಉಪಾಧ್ಯಕ್ಷ ವಯಕೋಲ್ ಉಸ್ಮಾನ್, ಸದಸ್ಯರಾದ ಅಪ್ಪಾರಂಡ ವಿಜು, ಕಲಿಯಂಡ ಬೀನಾ ನವೀನ್, ಮುಕ್ಕಾಟಿ ರಮೇಶ್, ಬಾಚಮಂಡ ಭರತ್, ಪಯ್ಯಡಿ ಮೂಸ, ಆಮೀನ, ಸಿಬ್ಬಂದಿ, ಹಿರಿಯರಾದ ನಾಟೋಳಂಡ ಪೆÇನ್ನಪ್ಪ ಇದ್ದರು.