ವೀರಾಜಪೇಟೆ, ಡಿ. 31 : ಕಳೆದ 27 ವರ್ಷಗಳಿಂದ ನಮ್ಮ ರಾಜ್ಯ ಹಾಗೂ ದೇಶವನ್ನು ಆಳಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಲ ಪಂಥೀಯ ರಾಜಕೀಯ ಧೋರಣೆ ಗಳನ್ನು ಹೊಂದಿದ್ದು ಕಾರ್ಮಿಕರು, ಬಡವರು, ರೈತರು, ಮಹಿಳೆಯರು, ಆದಿವಾಸಿಗಳು, ದಲಿತರು ಹಿಂದುಳಿದ ವರ್ಗಗಳ ಪರವಾಗಿ ನಿಲ್ಲದೆ ಜನ ವಿರೋಧಿ ನೀತಿ ಅನುಸರಿಸಿದೆ ಎಂದು ಕೇರಳದ ಕಣ್ಣಾನೂರು ಜಿಲ್ಲೆಯ ಭಾರತ ಕಮ್ಯೂನಿಸ್ಟ್ ಪಕ್ಷದ ಮುಖಂಡ ಸಂತೋಷ್ ಕುಮಾರ್ ಹೇಳಿದರು.
ಸಿಪಿಐ ಪಕ್ಷದ ವತಿಯಿಂದ ಇಲ್ಲಿನ ತಾಲೂಕು ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಪಕ್ಷದ ಎರಡನೇ ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಪಕ್ಷ ಕೊಡಗು ಜಿಲ್ಲೆಯ ಕಾರ್ಮಿಕರ ಜಲ್ವಂತ ಸಮಸ್ಯೆಗಳ ಬಗ್ಗೆ ಹೋರಾಟದ ರೂಪುರೇಷೆಗಳನ್ನು ರೂಪಿಸಿ ಆ ವರ್ಗಕ್ಕೆ ನ್ಯಾಯ ದೊರಕಿಸಲು ಪ್ರಂiÀiತ್ನಿಸಲಾಗುವದು ಎಂದರು.
ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ ಕೊಡಗಿನಲ್ಲಿ ರಾಜಕೀಯ ಪಕ್ಷಗಳು ಜಾತಿ ಜಾತಿಗಳ ನಡುವೆ ಸಂಘರ್ಷ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಮತ ಬೇಟೆಯಾಡುವದು ರಾಜಕಾರಣಿಗಳ ಕೆಲಸವಾಗಿದೆ. ಜಿಲ್ಲೆಯ ನಿವೇಶನ ರಹಿತರಿಗೆ ನಿವೇಶನ, ಕಾಡಾನೆಗಳ ನಿಯಂತ್ರಣ, ಆದಿವಾಸಿಗಳಿಗೆ ನಿವೇಶನ, ಅವರ ಬದುಕು ಸುಧಾರಣೆಗಾಗಿ ವಿವಿಧ ಯೋಜನೆಗಳನ್ನು ರೂಪಿಸುವಂತೆ ಸರಕಾರವನ್ನು ಆಗ್ರಹಿಸಿ ಪಕ್ಷ ನಿರಂತರ ಧರಣಿ ಮುಷ್ಕರ ಹೂಡಿ ಸರಕಾರದ ಗಮನಕ್ಕೆ ತಂದಿದೆ. ಪಕ್ಷದ ಬೇಡಿಕೆಗಳನ್ನು ಈಡೇರಿಸುವ ತನಕ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ರಾಜ್ಯ ಸಮಿತಿ ಸದಸ್ಯರಾದ ಗುಣಶೇಖರನ್ ಎಚ್.ಎಂ. ಸೋಮಪ್ಪ ಮಾತನಾಡಿ ದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ರಮೇಶ್ ಮಾಯಮುಡಿ, ಎಂ.ಕೆ.ಮೋಹನ್, ಧರ್ಮರಾಜ್, ಮಣಿ ಮಾರ್ಗೊಳ್ಳಿ, ರಜನಿಕಾಂತ್, ಮಹಿಳಾ ಘಟಕದ ನವನೀತ, ಮತ್ತಿತರರು ಹಾಜರಿದ್ದರು. ಪಕ್ಷದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ವಿ.ಸುನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನವಲುಗುಂದ ರಫೀಕ್ ನಿರೂಪಿಸಿ ದರು. ಸಮ್ಮೇಳನದಲ್ಲಿ ಜಿಲ್ಲೆಯಾದ್ಯಂತ ಕಾರ್ಮಿಕರು ಭಾಗವಹಿಸಿದ್ದರು. ಸಮ್ಮೇಳನದ ಮೊದಲು ಪಕ್ಷದ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಮುಖ್ಯ ಬೀದಿಗಳಲ್ಲಿ ಕೇರಳದ ಬ್ಯಾಂಡ್‍ನೊಂದಿಗೆ ಮೆರವಣಿಗೆ ನಡೆಸಿದರು. ಅಪರಾಹ್ನ ಇಲ್ಲಿನ ಪುರಭವನದಲ್ಲಿ ಪಕ್ಷದ ಸಮ್ಮೇಳನದ ಪ್ರತಿನಿಧಿಗಳ ಸಭೆ ನಡೆಯಿತು.