ವೀರಾಜಪೇಟೆ, ಡಿ. 31: ನಿನ್ನೆ ಸಂಜೆ 6.30ರ ಸಮಯದಲ್ಲಿ ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆ ಬಳಿಯಲ್ಲಿ ಇಲ್ಲಿನ ನೆಹರೂ ನಗರದ ನಿವಾಸಿ ಎಂ.ಎಸ್.ಸಲೀಂ ಎಂಬವರು ತನ್ನ ಬುಲೆಟ್ ಬೈಕ್ (ನಂ12ಕ್ಯೂ 5828) ನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಹಿಂದಿರುಗುತ್ತಿದ್ದಾಗ ಜೀಪು ಹಾಗೂ ಕಾರಿನಲ್ಲಿ ಬಂದ ಆರು ಮಂದಿ ಬೈಕ್ ತೆಗೆಯುವಂತೆ ತಿಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚರಂಡಿ ಪಕ್ಕದಲ್ಲಿಯೇ ಇದ್ದ ಗುದ್ದಲಿಯಿಂದ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ದೂರಿನ ಮೇರೆ ನಗರ ಪೊಲೀಸರು ಆರು ಮಂದಿ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಿಸಿಕೊಂಡು ಈ ಪೈಕಿ ವಿ.ಬಾಡಗ ಗ್ರಾಮದ ಕೆ.ಬೋಸ್ ಎಂಬಾತನನ್ನು ಬಂಧಿಸಿದ್ದಾರೆ.
ಈ ಆರು ಮಂದಿ ಹಲ್ಲೆ ನಡೆಸುವ ಸಂದರ್ಭದಲ್ಲಿ ಸಲೀಂನ ಜೇಬಿನಲ್ಲಿದ್ದ ರೂ. 32000 ನಗದು ಒಂದು ಸ್ಯಾಮ್‍ಸಂಗ್ ಮೋಬೈಲ್ ಹಾಗೂ ಬೈಕ್‍ನ ಕೀಯನ್ನು ಅಪಹರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಲ್ಲಿ ಭಾಗವಹಿಸಿದ್ದ ಟೆರೆ, ಬೋಪಣ್ಣ ಸೇರಿದಂತೆ ಇತರ ಮೂರು ಮಂದಿ ತಲೆಮರೆಸಿಕೊಂಡಿರವದಾಗಿ ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಿದ ನಂತರ ಜೀಪು ನಂ (ಕೆ.ಎ.12 ಎಂಎ 4478) ಕಾರು ನಂ (ಕೆ.ಎ.05 ಎಂ.ಡಿ. 853) ವಾಹನ ಗಳಲ್ಲಿ 5ಮಂದಿ ಪರಾರಿಯಾಗಿ ಪೊಲೀಸರು ಎರಡು ವಾಹನಗಳು ಹಾಗೂ ಮೂರು ಮಂದಿಯ ಶೋಧನೆಯಲ್ಲಿ ತೊಡಗಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ಸಲೀಂನ ಪರಿಸ್ಥಿತಿ ಗಂಭೀರವಾಗಿದ್ದು, ತಲೆ ಹಾಗೂ ಬಲದ ಕಣ್ಣಿನ ಬಳಿ ತೀವ್ರ ಗಾಯ ಉಂಟಾಗಿದೆ. ದೂರುದಾರರಾದ ಸಲೀಂಗೆ ಮೂರು ಮಂದಿಯನ್ನು ಹೊರತು ಪಡಿಸಿದರೆ ಇತರರ ಮುಖ ಪರಿಚಯವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.