ಸೋಮವಾರಪೇಟೆ, ಡಿ. 31: ನೂತನವಾಗಿ ರಚನೆಯಾಗಿರುವ ಸೋಮವಾರಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾಗಿ ಎಂ.ಟಿ. ದಾಮೋಧರ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಕೆ. ಮಲ್ಲಪ್ಪ ಆಯ್ಕೆಯಾಗಿದ್ದಾರೆ.
ನೂತನ ವೇದಿಕೆಯನ್ನು ರಚಿಸುವ ಸಲುವಾಗಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ಎಸ್.ಪಿ. ಪ್ರಸನ್ನ, ಸಹ ಕಾರ್ಯದರ್ಶಿಯಾಗಿ ಎಚ್.ಸಿ. ಚಂಗಪ್ಪ, ಖಜಾಂಚಿಯಾಗಿ ಕೆ.ಎನ್. ಶಿವಕುಮಾರ್, ಕಾನೂನು ಸಲಹೆಗಾರರಾಗಿ ವಕೀಲರಾದ ಬಿ.ಎಸ್. ಸುದೀಪ್ ಆಯ್ಕೆಯಾದರು.