ಮಡಿಕೇರಿ, ಡಿ. 30: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಮಾಜಿ ಸೈನಿಕರಿಬ್ಬರು ಸಾಧನೆತೋರಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.18 ಮೆಡ್ರಾಸ್ (ಮೈಸೂರು) ಬೆಟಾಲಿಯನ್‍ನವರಾದ ಪಟ್ರಪಂಡ ಚಂಗಪ್ಪ 400 ಮೀಟರ್ ಲೋ ಹರ್ಡಲ್ಸ್‍ನಲ್ಲಿ ಪ್ರಥಮ ಹಾಗೂ 100 ಮೀಟರ್ ಹೈ ಹರ್ಡಲ್ಸ್‍ನಲ್ಲಿ 3ನೇ ಸ್ಥಾನ ಗಳಿಸಿದ್ದಾರೆ. ಅಮೆ ಆರ್. ಜನಾರ್ಧನ್ ಅವರು 1500 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ 5000 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ಫೆಬ್ರವರಿ 21 ರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ದೇಶ ಸೇವೆಗೈದು ನಿವೃತ್ತರಾದ ಬಳಿಕ ಕ್ರೀಡೆಯಲ್ಲಿ ಇವರು ತೋರಿರುವ ಸಾಧನೆಗೆ ಜಿಲ್ಲೆಯ 18 ಮೆಡ್ರಾಸ್ (ಮೈಸೂರು) ಬೆಟಾಲಿಯನ್‍ನ ಜಿಲ್ಲೆಯ ನಿವೃತ್ತ ಯೋಧರು ಹರ್ಷ ವ್ಯಕ್ತಪಡಿಸಿದ್ದಾರೆ.