*ಗೋಣಿಕೊಪಲು, ಡಿ. 30 : ಅಂದಾಜು 75 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಕೈಕೇರಿ ಗ್ರಾಮದ ಉತ್ತಪ್ಪ ಅವರ ಮನೆಯ ಮುಂದಿನ ರಸ್ತೆಯಲ್ಲಿ ಶವ ಕಳೆದ ಮೂರು ದಿನಗಳ ಹಿಂದೆ ಪತ್ತೆಯಾಗಿದೆ. 5 ಅಡಿ ಎತ್ತರ, ನೀಲಿ ಬಣ್ಣದ ಚೌಕಳಿ ಇರುವ ಲುಂಗಿ, ಬಿಳಿಬಣ್ಣದ ಕಪ್ಪು ಗೆರೆಗಳ ತುಂಬು ತೋಳಿನ ಶರ್ಟ್ ತೊಟ್ಟಿದ್ದಾರೆ. ವಾರಸುದಾರರು ಗೋಣಿಕೊಪ್ಪಲಿನ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.