ಸೋಮವಾರಪೇಟೆ, ಡಿ.30: ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಆಶ್ರಯದಲ್ಲಿ ತಾ.31ರಂದು ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಜಯಕರ್ನಾಟಕ ಕ್ರಿಕೆಟ್ ಕಪ್-2017 ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಆಹ್ವಾನಿತ ತಂಡಗಳ ನಡುವೆ ಪಂದ್ಯಾಟ ನಡೆಯಲಿದ್ದು, ಪಂದ್ಯಾಟದಲ್ಲಿ ಅತಿಥೇಯ ತಂಡ ಜಯಕರ್ನಾಟಕ ಎ ಮತ್ತು ಬಿ ತಂಡ, ಹಿಂದೂಸ್ಥಾನ್, ಡಾಲ್ಫಿನ್ ಸ್ಪೋಟ್ರ್ಸ್ ಕ್ಲಬ್, ಚೇಂಬರ್ ಆಫ್ ಕಾಮರ್ಸ್, ಒಕ್ಕಲಿಗ ಯುವ ವೇದಿಕೆ, ಆಟೋ ಯೂನಿಯನ್ ಹಾಗೂ ಜೆ.ಸಿ. ಸೋಮವಾರಪೇಟೆ ತಂಡಗಳು ಭಾಗವಹಿಸಲಿವೆ.