ಸೋಮವಾರಪೇಟೆ, ಡಿ. 30: ಹೆಬ್ಬಾಲೆ ಗ್ರಾಮದ ಬಿ.ಎ. ಮಧುಕರ ಅವರು ರಚಿಸಿರುವ ಚೊಚ್ಚಲ ಕಾದಂಬರಿ ‘ಒಂದು ಆಸೆ ನೂರು ಕನಸು’ ತಾ. 31ರಂದು (ಇಂದು) ಹೆಬ್ಬಾಲೆಯ ಸಿಕ್ರೇಟ್ ಹಾರ್ಟ್ ಕಾನ್ವೆಂಟ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.

ಬೆಳಿಗ್ಗೆ 10.30ಕ್ಕೆ ನಡೆಯುವ ಕಾದಂಬರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ವಹಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಅವರು ಕಾದಂಬರಿ ಬಿಡುಗಡೆ ಮಾಡಲಿದ್ದು, ಕವಯತ್ರಿ ಸುನಿತಾ ಲೋಕೇಶ್, ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಹೋಬಳಿ ಅಧ್ಯಕ್ಷ ರಂಗಸ್ವಾಮಿ, ಗಂಗೂರು ಶಾಲೆಯ ಮುಖ್ಯೋಪಾಧ್ಯಾಯ ಲೋಕೇಶ್ ಅವರುಗಳು ಭಾಗವಹಿಸಲಿದ್ದಾರೆ.