ವೀರಾಜಪೇಟೆ, ಡಿ. 30: ನಗರದಲ್ಲಿ ನಿನ್ನೆ ಮಧ್ಯರಾತ್ರಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿರುವ ಘಟನೆ ನಗರ ಪಂಜರ್‍ಪೇಟೆ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಇಲ್ಲಿನ ಪಂಜರ್‍ಪೇಟೆಯಲ್ಲಿ ನಿನ್ನೆ ಮಧ್ಯರಾತ್ರಿ ಸುಭಾಶ್‍ನಗರದಿಂದ ಪಟ್ಟಣಕ್ಕೆ ಅಗಮಿಸುತಿದ್ದ ಬಜಾಜ್ ಪಲ್ಸರ್ ಬೈಕ್ ಸಂಖ್ಯೆ (ಕೆಎ12-ಎಲ್-4557) ವಾಹನದಲ್ಲಿ ಸುಭಾಶ್‍ನಗರದ ನಿವಾಸಿ ಐತಿಚಂಡ ರಂಜು ಮಂದಣ್ಣ ಮತ್ತು ವಿಘ್ನೇಶ್ ತೆರಳುತ್ತಿದ್ದರು. ವೀರಾಜಪೇಟೆ ಪಟ್ಟಣದಿಂದ ಕಲ್ಲುಬಾಣೆ ಗ್ರಾಮಕ್ಕೆ ತೆರಳುತ್ತಿದ್ದ ಮೊಹಮ್ಮದ್ ರಾಫಿ ಎಂಬವರಿಗೆ ಸೇರಿದ ಮಾರುತಿ ಕಾರು (ಕೆಎ-09ಎನ್-2997) ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರರು ವೇಗವಾಗಿ ಕಾರಿಗೆ ಅಪ್ಪಳಿಸಿದ ಪರಿಣಾಮ ಬೈಕ್ ಚಾಲನೆ ಮಾಡುತ್ತಿದ್ದ ರಂಜು ಮಂದಣ್ಣ ಅವರ ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದು, ಹಿಂಬದಿ ಸವಾರ ವಿಘ್ನೇಶ್ ಎಂಬವನಿಗೆ ಬಲಗಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸಾರ್ವಜನಿಕರ ಸಹಾಯದಿಂದ ಗಾಯಳುಗಳನ್ನು ಸ್ಥಳೀಯ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರ ಪೊಲೀಸರು ಬೈಕ್ ಸವಾರರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಅವಘಡಕ್ಕೀಡಾದ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.