ಶ್ರೀಮಂಗಲ, ಡಿ. 30: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಲಾಗಿದ್ದು, ಹೆಚ್ಚುವರಿ ಅಧ್ಯಕ್ಷರಾಗಿ ಹುದಿಕೇರಿ ಗ್ರಾಮದ ಮೀದೇರಿರ ಎಂ. ನವೀನ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ಇದಲ್ಲದೇ ಬೇಟೋಳಿ ಗ್ರಾಮದ ಪೋರೇರ ಎಂ. ಬಿದ್ದಪ್ಪ, ಮೇಕೂರು ಹೊಸಕೋಟೆ ಗ್ರಾಮದ ಪಿ. ರಾಮ್‍ದಾಸ್, ಹಚ್ಚಿನಾಡು ಗ್ರಾಮದ ಮಚ್ಚಾರಂಡ ರೀನಾ ಗಿರೀಶ್ ಮತ್ತು ವೀರಾಜಪೇಟೆ ತಾಲೂಕು ತಹಶೀಲ್ದಾರರನ್ನು ಸಮಿತಿಯ ಕಾರ್ಯದರ್ಶಿಯಾಗಿ ನೇಮಿಸಿ ಭೂ ಮಂಜೂರಾತಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಎಲ್. ಮಹಂತೇಗೌಡ ಆದೇಶ ಹೊರಡಿಸಿದ್ದಾರೆ.