ಗೋಣಿಕೊಪ್ಪ ವರದಿ, ಡಿ. 30 : ಹಾತೂರು ಪ್ರೌಢÀಶಾಲೆ ವತಿಯಿಂದ ಗ್ರಾಮದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜ. 9 ರಂದು ಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಗೋಪಾಲಕೃಷ್ಣ ತಿಳಿಸಿದ್ದಾರೆ.
ಶಾಲಾ ವ್ಯಾಪ್ತಿಯ ಗ್ರಾಮಗಳಾದ ಹಾತೂರು, ಕೈಕೇರಿ, ಕೊಳ್ತೋಡು-ಬೈಗೋಡು ಹಾಗೂ ಕುಂದ ಗ್ರಾಮಗಳಲ್ಲಿ ಕ್ರೀಡೆ, ಸೇನೆ ಶೈಕ್ಷಣಿಕವಾಗಿ ಸಮಾಜಕ್ಕೆ ಕಾಣಿಕೆ ನೀಡಿರುವವರನ್ನು ಸನ್ಮಾನಿಸುವ ಮೂಲಕ ಅವರನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವೀರಚಕ್ರ ಪುರಸ್ಕøತ ಮೇಜರ್ ಜನರಲ್ (ನಿ) ಕುಪ್ಪಂಡ ಪಿ. ನಂಜಪ್ಪ, ಮಾಜಿ ಅಂತರ್ರಾಷ್ಟ್ರೀಯ ಓಟಗಾರ ತೀತಮಾಡ ಅರ್ಜುನ್ ದೇವಯ್ಯ, ಮಾಜಿ ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಕೊಡಂದೇರ ಕುಶ ನಂಜಪ್ಪ, ಒಲಿಂಪಿಯನ್ ಒಕ್ಕಲಿಗರ ರಘುನಾಥ್ ಇವರುಗಳನ್ನು ಸನ್ಮಾನಿಸಲಾಗುವದು. ಮುಖ್ಯ ಅತಿಥಿಗಳಾಗಿ ಶಾಸಕ ಕೆ. ಜಿ. ಬೋಪಯ್ಯ ಪಾಲ್ಗೊಳ್ಳಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಮಣಿ ಉಪಸ್ಥಿತರಿರುವರು ಎಂದರು. ಗೋಷ್ಠಿಯಲ್ಲಿ ಶಾಲಾ ಶಿಕ್ಷಕ ಸುದೀಪ್ ಉಪಸ್ಥಿತರಿದ್ದರು.