ಮಡಿಕೇರಿ, ಡಿ. 30: ಶಿವಮೊಗ್ಗ ಜಿಲ್ಲೆಯ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 16ನೇ ರಾಜ್ಯಮಟ್ಟದ ವುಶು ಚಾಂಪಿಯನ್‍ಶಿಪ್‍ನಲ್ಲಿ ಕೊಡಗು ಜಿಲ್ಲೆಯ ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 2ನೇ ತರಗತಿ ವಿದ್ಯಾರ್ಥಿ ಪಿ.ಎಸ್. ಜೀವ ಬೆಳ್ಳಿ ಪದಕವನ್ನು ಪಡೆದಿರುತ್ತಾನೆ. ಈ ವಿದ್ಯಾರ್ಥಿ ಪೊನ್ನಾಟ್ಯಂಡ ನವೀನ್ ನಾಣಯ್ಯ ಮತ್ತು ಪ್ರಿಯಾ ಪದ್ಮಾವತಿ ದಂಪತಿಯ ಪುತ್ರ. ಎನ್.ಸಿ. ಸುದರ್ಶನ್ ವುಶುನ ಪ್ರಧಾನ ಕಾರ್ಯದರ್ಶಿ. ಈ ವಿದ್ಯಾರ್ಥಿ ಬಿ.ಎ. ಆನಂದ ಅವರ ಶಿಷ್ಯ.