ಮಡಿಕೇರಿ, ಡಿ. 29: ಗಂಗೇಚ್ಚ ಯಮುನೇಚ್ಛೈವ ಗೋದಾವರಿ ಸರಸ್ವತಿ ನರ್ಮದೆ ಸಿಂಧೂ ಕಾವೇರಿ ಜಲೇಸ್ಮಿನ್ ಕುರು ಓಂ ಶಾಂತಿ ಶಾಂತಿ ಶಾಂತಿ... ಅರ್ಥಾತ್ ಈ ಏಳು ನದಿಗಳಲ್ಲಿ ಸ್ನಾನ ಮಾಡಿದರೆ ಸರ್ವಪಾಪಗಳೂ ಕಳೆದು ಮೈಮನಸುಗಳು ಪಾವನವಾಗುತ್ತವೆ ಎಂಬದನ್ನು ನಮ್ಮ ದೇಶದ ಮಹಾ ಗ್ರಂಥಗಳು, ಪುರಾಣಗಳಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಸಾರಿ ಹೇಳಿದೆ. ದೇಶದ ಸಪ್ತ ಪವಿತ್ರ ನದಿಗಳಲ್ಲಿ ನಮ್ಮ ಜೀವನದಿ ಕಾವೇರಿಯೂ ಒಂದು ಎಂಬದು ನಮ್ಮ ಜಿಲ್ಲೆ ಮಾತ್ರವಲ್ಲ ನಮ್ಮ ರಾಜ್ಯಕ್ಕೂ ಹೆಮ್ಮೆ... ಆದರೆ ದುರಂತ ಎಂದರೆ ಹುಲು ಮಾನವನ ದುರಾಸೆಯಿಂದಾಗಿ ಸರಸ್ವತಿ ನದಿ ದೇಶದಲ್ಲಿ ಅಸ್ತಿತ್ವದಲ್ಲೇ ಇಲ್ಲ. ಗಂಗಾ ನದಿಯೂ ಕೊನೆಯುಸಿರೆಳೆಯುತ್ತಿದೆ. ಇದೀಗ ಈ ನದಿಗಳ ಸಾಲಿಗೆ ನಮ್ಮ ಜೀವನದಿ ಕಾವೇರಿಯೂ ಸೇರುತ್ತಿದೆ. ಗಂಗಾ ನದಿಗಿಂತಲೂ ಕಾವೇರಿ ನದಿ 600 ಪಟ್ಟು ಹೆಚ್ಚು ಮಲಿನವಾಗಿದೆ ಎಂಬ ಮಾಹಿತಿ ಇತ್ತಿಚೆಗಷ್ಟೆ ವರದಿಯಾಗಿತ್ತು.
(ಮೊದಲ ಪುಟದಿಂದ) ಇದೀಗ ಈ ವರದಿಯನ್ನು ಪುಷ್ಟೀಕರಿಸುವಂತಹ ಘಟನೆಗಳು ನಮ್ಮ ಕೊಡಗು ಜಿಲ್ಲೆಯಲ್ಲೇ ನಡೆಯುತ್ತಿವೆ. ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಕಾವೇರಿ ನದಿ ಮೇಲೆ ಘನಘೋರ ಅತ್ಯಾಚಾರ ನಡೆಯುತ್ತಿದೆ.
ಹೇಳಿ ಕೇಳಿ ಇದೀಗ ವರ್ಷಾಂತ್ಯದ ದಿನ ಸಮೀಪಿಸಿದೆ. ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ದಾಂಗುಡಿಯಿಡುತ್ತಿದ್ದಾರೆ. ಪವಿತ್ರ ತಲಕಾವೇರಿ ಮತ್ತು ಭಾಗಮಂಡಲ ತ್ರಿವೇಣಿ ಸಂಗಮಕ್ಕೂ ಭೇಟಿ ಕೊಡುತ್ತಿದ್ದಾರೆ. ಆದರೆ ಈ ಮಂದಿ ಸೃಷ್ಟಿಸುತ್ತಿರುವ ಅಧ್ವಾನಗಳು ಮಾತ್ರ ಅಷ್ಟಿಷ್ಟಲ್ಲ. ಭಾಗಮಂಡಲಕ್ಕೆ ದೊಡ್ಡ ದೊಡ್ಡ ಬಸ್‍ಗಳಲ್ಲಿ ಆಗಮಿಸುವ ಪ್ರವಾಸಿಗರು ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲೇ ಬೃಹತ್ ಸ್ಟೌ, ಸಿಲಿಂಡರ್, ಪಾತ್ರೆಗಳನಿಟ್ಟು ಅಡುಗೆ ತಯಾರಿಸುತ್ತಿದ್ದಾರೆ. ಈ ಸಂದರ್ಭ ಉತ್ಪತ್ತಿಯಾಗುವ ಕಸಗಳು ಮತ್ತು ಹೆಚ್ಚಾದ ಊಟ, ಎಂಜಲುಗಳನ್ನು ನೇರವಾಗಿ ತ್ರಿವೇಣಿ ಸಂಗಮಕ್ಕೇ ಸುರಿಯುತ್ತಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಏಳು ಗಂಟೆಗೆ ತ್ರಿವೇಣಿ ಸಂಗಮಕ್ಕೆ ಭೇಟಿ ಕೊಟ್ಟಾಗ ಎದುರಾದ ಸನ್ನಿವೇಶ ಇದು. ಸಂಗಮದ ನೀರಿನಲ್ಲೇ ಕೆಜಿಗಟ್ಟಲೆ ಅನ್ನ ಮತ್ತು ತರಕಾರಿ ಮುಳುಗಿತ್ತು. ಅಕ್ಕಿ, ತರಕಾರಿ, ಪಾತ್ರೆ ತೊಳೆದ ನೀರು ನೇರವಾಗಿ ಸಂಗಮವನ್ನೇ ಸೇರುತ್ತಿತ್ತು. ಅಲ್ಲದೆ ಪ್ರವಾಸ ಬಂದ ಮಕ್ಕಳು ಆಹಾರ ಸೇವಿಸಿದ ಬಳಿಕ ತಟ್ಟೆ ಲೋಟ ತೊಳೆದು ನೀರನ್ನು ಸೇರವಾಗಿ ಸಂಗಮಕ್ಕೇ ಚೆಲ್ಲುತ್ತಿದ್ದರು. ಊಟದ ಬಳಿಕ ದೊಡ್ಡ ದೊಡ್ಡ ಪಾತ್ರೆಗಳನ್ನು ಭಗಂಡೇಶ್ವರ ದೇವಸ್ಥಾನದ ಎದುರಿನಲ್ಲಿ ಹರಿಯುವ ಕನ್ನಿಕಾ ನದಿಯಲ್ಲೇ ತೊಳೆಯುತ್ತಿದ್ದರು. ಈ ನೀರೆಲ್ಲಾ ನೇರವಾಗಿ ಸಂಗಮವನ್ನೇ ಸೇರುತ್ತಿತ್ತು. ಮಾತ್ರವಲ್ಲ ಸಂಗಮದ ಸಮೀಪದ ಸೇತುವೆ ಬಳಿ ಯುವಕ ಯುವತಿಯರು ನದಿಗೆ ಧುಮುಕಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಇಡೀ ಪಾರ್ಕಿಂಗ್ ಪ್ರದೇಶದಲ್ಲಿ ಏನಿಲ್ಲವೆಂದರೂ 15 ಕಡೆಗಳಲ್ಲಿ ಅಡುಗೆ ಮಾಡಲಾಗುತ್ತಿತ್ತು. ತಿಂದುಂಡು ಉಳಿದ ಆಹಾರ ಗಲೀಜುಗಳನ್ನು ಅಲ್ಲಲ್ಲೇ ಎಸೆಯಲಾಗಿತ್ತು. ಇಡೀ ಪ್ರದೇಶವೇ ಅಸಹ್ಯವಾಗಿ ಗಬ್ಬೆದ್ದು ಹೋಗಿತ್ತು. ಒಂದೆಡೆ ಎಂಜಲು ನೀರು, ಗಲೀಜು ಸಂಗಮ ಸೇರುತ್ತಿದ್ದರೆ ಅದೇ ಸಂಗಮದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಕಾವೇರಿ ಭಕ್ತರು ಮುಳುಗಿ ಶ್ರದ್ಧಾ ಭಕ್ತಿಯಿಂದ ಪುಣ್ಯ ಸ್ನಾನ ಮಾಡುತ್ತಿದ್ದರು. ಇದು ಎಂಜಲು ನೀರು ಎಂಬ ಅರಿವು ಅವರಿಗಿದ್ದರೂ ಎಲ್ಲರಲ್ಲೂ ಅಸಹಯಾಕತೆ.
ಅಲ್ಲಿದ್ದ ಬಹುತೇಕ ಪ್ರವಾಸಿಗರಲ್ಲೂ ತಾವು ಮೋಜು ಮಸ್ತಿ ಮಾಡಲು ಬಂದಿದ್ದೇವೆಯೇ ಹೊರತು, ನಾವು ಪವಿತ್ರ ಸ್ಥಳವೊಂದರಲ್ಲಿ ಇದ್ದೇವೆ, ಪವಿತ್ರ ನದಿಯೊಂದನ್ನು ಮಲಿನ ಮಾಡುತ್ತಿದ್ದೇವೆ. ಲಕ್ಷಾಂತರ ಭಕ್ತರ ನಂಬಿಕೆಗಳನ್ನು ಘಾಸಿಗೊಳಿಸುತ್ತಿದ್ದೇವೆ ಎಂಬ ಪ್ರಜ್ಞೆ ಕಿಂಚಿತ್ತೂ ಇರಲಿಲ್ಲ. ಪ್ರವಾಸಿಗರ ದೂಂಡಾವರ್ತನೆ ಪ್ರಶ್ನಿಸಿದ ಭದ್ರತಾ ಸಿಬ್ಬಂದಿ ಮೇಲೆ ಕೆಲ ಪ್ರವಾಸಿಗರು ನೇರವಾಗಿ ಹಲ್ಲೆ ಮಾಡಲು ಮುಂದಾದ ಘಟನೆಯೂ ನಡೆಯಿತು.
ಯಾಕೆ ಈ ದುರಂತ?
ದೊಡ್ಡ ಪಾತ್ರೆಗಳನ್ನು ಭಗಂಡೇಶ್ವರ ದೇವಸ್ಥಾನದ ಎದುರಿನಲ್ಲಿ ಹರಿಯುವ ಕನ್ನಿಕಾ ನದಿಯಲ್ಲೇ ತೊಳೆಯುತ್ತಿದ್ದರು. ಈ ನೀರೆಲ್ಲಾ ನೇರವಾಗಿ ಸಂಗಮವನ್ನೇ ಸೇರುತ್ತಿತ್ತು. ಮಾತ್ರವಲ್ಲ ಸಂಗಮದ ಸಮೀಪದ ಸೇತುವೆ ಬಳಿ ಯುವಕ ಯುವತಿಯರು ನದಿಗೆ ಧುಮುಕಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಇಡೀ ಪಾರ್ಕಿಂಗ್ ಪ್ರದೇಶದಲ್ಲಿ ಏನಿಲ್ಲವೆಂದರೂ 15 ಕಡೆಗಳಲ್ಲಿ ಅಡುಗೆ ಮಾಡಲಾಗುತ್ತಿತ್ತು. ತಿಂದುಂಡು ಉಳಿದ ಆಹಾರ ಗಲೀಜುಗಳನ್ನು ಅಲ್ಲಲ್ಲೇ ಎಸೆಯಲಾಗಿತ್ತು. ಇಡೀ ಪ್ರದೇಶವೇ ಅಸಹ್ಯವಾಗಿ ಗಬ್ಬೆದ್ದು ಹೋಗಿತ್ತು. ಒಂದೆಡೆ ಎಂಜಲು ನೀರು, ಗಲೀಜು ಸಂಗಮ ಸೇರುತ್ತಿದ್ದರೆ ಅದೇ ಸಂಗಮದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಕಾವೇರಿ ಭಕ್ತರು ಮುಳುಗಿ ಶ್ರದ್ಧಾ ಭಕ್ತಿಯಿಂದ ಪುಣ್ಯ ಸ್ನಾನ ಮಾಡುತ್ತಿದ್ದರು. ಇದು ಎಂಜಲು ನೀರು ಎಂಬ ಅರಿವು ಅವರಿಗಿದ್ದರೂ ಎಲ್ಲರಲ್ಲೂ ಅಸಹಯಾಕತೆ.

ಶುಲ್ಕ ವಸೂಲಾತಿಗೆ ಮಾತ್ರ ಸೀಮಿತವಾದಂತಿದೆ. ಹೀಗೆ ಪವಿತ್ರ ತ್ರಿವೇಣಿ ಸಂಗಮ ಅಕ್ಷರಶಃ ಪ್ರವಾಸಿಗರ ಮೋಜು ಮಸ್ತಿಯ ತಾಣವಾಗಿ, ಕಸ ವಿಲೇವಾರಿಯ ಕೇಂದ್ರವಾಗಿ ಮಾರ್ಪಟ್ಟಿದೆ.
ಸ್ವಚ್ಛ ಸಂಗಮ- ಪರಿಹಾರ ಹೇಗೆ?
ಈ ಭಾಗದಲ್ಲಿ ಪ್ರವಾಸಿಗರು ಅಡುಗೆ ಮಾಡುವದನ್ನು ತಡೆಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದಲೇ ವ್ಯಕ್ತವಾಗಿದೆ. ಪ್ರವಾಸ ಬರುವ ಬಡ ಶಾಲಾ ವಿದ್ಯಾರ್ಥಿಗಳು ದುಬಾರಿ ಹಣ ತೆತ್ತು ಹೋಟೆಲುಗಳಲ್ಲಿ ತಿನ್ನುವದಿಲ್ಲ. ಹಾಗಾಗಿ ಇವರಿಗಾಗಿಯೇ ಪಾರ್ಕಿಂಗ್ ಪ್ರದೇಶದಿಂದ ಅನತಿ ದೂರದಲ್ಲಿ ಒಂದೆರಡು ಶೆಡ್ ನಿರ್ಮಿಸಿಕೊಟ್ಟು ಅಡುಗೆಗೆ ಅವಕಾಶ ಕಲ್ಪಿಸಬಹುದು. ಜೊತೆಗೆ ಕಸ ವಿಲೇವಾರಿಗೂ ಅಲ್ಲೇ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಲ್ಲಿ ಪಾರ್ಕಿಂಗ್ ಪ್ರದೇಶ ಸ್ವಚ್ಛವಾಗಿರುವದರ ಜೊತೆಗೆ ಸಂಗಮ ಮಲಿನವಾಗುವದು ತಪ್ಪುತ್ತದೆ. ಒರ್ವ ಭದ್ರತಾ ಸಿಬ್ಬಂದಿ ಸದಾ ಇದರ ಮೇಲುಸ್ತುವಾರಿ ವಹಿಸಿಕೊಳ್ಳಬೇಕು. ನಿಯಮ ಉಲ್ಲಂಘಿಸುವ ಪ್ರವಾಸಿಗರಿಗೆ ಭಾರೀ ದಂಡ ವಿಧಿಸುವ ಕೆಲಸ ಕಟ್ಟುನಿಟ್ಟಿನಲ್ಲಿ ಆಗಬೇಕು.
ಅಧಿಕಾರಿಗಳೇ, ಜನಪ್ರತಿನಿಧಿಗಳೇ
ನಿದ್ದೆ ಬಿಟ್ಟೇಳಿ
ಕಾವೇರಿ ಎಂಬುದು ಕೇವಲ